Breaking News

ದೇವಸ್ಥಾನದ ಎದುರೇ ಸುಟ್ಟು ಕರಕಲಾಯ್ತು ಪೂಜೆ ಮಾಡಿಸಲು ತಂದಿದ್ದ ಹೊಸ ರಾಯಲ್‌ ಎನ್‌ ಫೀಲ್ಡ್‌ ಬೈಕ್‌

Spread the love

ಕಳೆದ ಕೆಲವು ದಿನಗಳಿಂದೀಚೆಗೆ ಎಲೆಕ್ಟ್ರಿಕ್‌ ಸ್ಕೂಟರ್‌ ಗಳಲ್ಲಿ ಬೆಂಕಿ ಕಾಣಿಸಿಕೊಂಡಿರೋ ಸುದ್ದಿ ಆಗಾಗ ಕೇಳಿ ಬರ್ತಾನೇ ಇತ್ತು. ಇದೀಗ ರಾಯಲ್‌ ಎನ್‌ ಫೀಲ್ಡ್‌ ಬೈಕ್‌ ಒಂದು ಸುಟ್ಟು ಕರಕಲಾಗಿರೋದನ್ನು ನೋಡಿ ಎಲ್ಲರೂ ಶಾಕ್‌ ಆಗಿದ್ದಾರೆ.

ಮಾಲೀಕ ಹೊಸ ಬೈಕ್‌ ಗೆ ಪೂಜೆ ಮಾಡಿಸುವ ಸಲುವಾಗಿ ದೇವಸ್ಥಾನಕ್ಕೆ ತಂದಿದ್ದರು.

ಕೆಲವೇ ಕ್ಷಣಗಳಲ್ಲಿ ಬೈಕ್‌ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಷ್ಟೇ ಅಲ್ಲ ಬೈಕ್‌ ಬಾಂಬ್‌ ನಂತೆ ಭಯಂಕರ ಸದ್ದಿನೊಂದಿಗೆ ಸ್ಫೋಟಗೊಂಡಿದೆ.

ಈ ಘಟನೆ ನಡೆದಿದ್ದು ಮೈಸೂರಿನಲ್ಲಿ ಅಂತಾ ಹೇಳಲಾಗ್ತಿದೆ. ರವಿಚಂದ್ರನ್‌ ಎಂಬಾತ ಹೊಸ ಎನ್‌ ಫೀಲ್ಡ್‌ ಬೈಕ್‌ ಗೆ ಪೂಜೆ ಮಾಡಿಸಲು ಅನಂತಪುರದ ಆಂಜನೇಯ ಸ್ವಾಮಿ ದೇವಾಲಯಕ್ಕೆ ತಂದಿದ್ದರು. ರಸ್ತೆ ಬದಿಯಲ್ಲಿ ಎನ್‌ ಫೀಲ್ಡ್‌ ನಿಲ್ಲಿಸಿ ಪೂಜೆಯ ತಯಾರಿ ಮಾಡಿಕೊಳ್ತಿದ್ದರು.

ಮೊದಲು ಬೈಕ್‌ ನಲ್ಲಿ ಹೊಗೆ ಕಾಣಿಸಿಕೊಂಡಿದೆ. ಅದಾದ್ಮೇಲೆ ಬೆಂಕಿ ಹೊತ್ತಿಕೊಂಡು ಕೆಲ ಹೊತ್ತಿನಲ್ಲೇ ಬೈಕ್‌ ಸ್ಫೋಟಗೊಂಡಿದೆ. ಬೆಂಕಿ ಅಕ್ಕಪಕ್ಕದಲ್ಲಿ ನಿಂತಿದ್ದ ವಾಹನಗಳಿಗೂ ಆವರಿಸಿಕೊಂಡಿದೆ. ಈ ದೃಶ್ಯ ನಿಜಕ್ಕೂ ಗಾಬರಿ ಹುಟ್ಟಿಸುವಂತಿದೆ.

https://twitter.com/i/status/1510463748498022400


Spread the love

About Laxminews 24x7

Check Also

ನೀತಿ ಆಯೋಗದಿಂದ ಕಾಳಗಿಗೆ 2ನೇ ಸ್ಥಾನ, ₹1 ಕೋಟಿ ವಿಶೇಷ ಅನುದಾನ ಘೋಷಣೆ: ಸಚಿವ ಪ್ರಿಯಾಂಕ್ ಖರ್ಗೆ ಹರ್ಷ

Spread the loveನೀತಿ ಆಯೋಗದಿಂದ ಕಾಳಗಿಗೆ 2ನೇ ಸ್ಥಾನ, ₹1 ಕೋಟಿ ವಿಶೇಷ ಅನುದಾನ ಘೋಷಣೆ: ಸಚಿವ ಪ್ರಿಯಾಂಕ್ ಖರ್ಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ