ವಿಜಯವಾಡ: ಯಾರಿಗೂ ತಿಳಿಯದಂತೆ ಖಾಸಗಿ ಬಸ್‌ನಲ್ಲಿ ಸಾಗಿಸುತ್ತಿದ್ದ 5 ಕೋಟಿ ರೂಪಾಯಿ ಹಣವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಘಟನೆ ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ನಲ್ಲಜರ್ಲ ವಲಯದ ವೀರವಳ್ಳಿಯಲ್ಲಿ ನಡದಿದೆ.
ಟೋಲ್ ಪ್ಲಾಜಾದಲ್ಲಿ ಬಸ್ ತಪಾಸಣೆ ಮಾಡುವಾಗ ಭಾರೀ ಮೊತ್ತದ ಹಣ ಪತ್ತಯಾಗಿದ್ದು, ಬಸ್ ಚಾಲಕ ಮತ್ತು ನಿರ್ವಾಹಕನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ವಶಕ್ಕೆ ಪಡೆಯಲಾದ ಮೊತ್ತು ಸುಮಾರು 5 ಕೋಟಿ ರೂಪಾಯಿ ಎಂದು ತಿಳಿದುಬಂದಿದೆ.
ಪೊಲೀಸರು ಟೋಲ್ ಪ್ಲಾಜಾದಲ್ಲಿ ಬಸ್ ಅನ್ನು ಪರಿಶೀಲಿಸಿದಾಗ ಬಸ್‌ನಲ್ಲಿ ಲಗೇಜ್ ಕಂಪಾರ್ಟ್ಮೆಂಟ್ಗಳಲ್ಲಿ ಮತ್ತು ಸೀಟಿನ ಕೆಳಗೆ ನೋಟುಗಳ ಬಂಡಲ್ಗಳನ್ನು ಸಾಗಿಸುತ್ತಿರುವುದು ಕಂಡು ಬಂದಿದೆ. ನಗದನ್ನು ವಶಪಡಿಸಿಕೊಂಡಿರುವ ಪೊಲೀಸರು ಹಣ ಎಲ್ಲಿಂದ ತರಲಾಗಿದೆ ಮತ್ತು ಎಲ್ಲಿಗೆ ಸಾಗಿಸುತ್ತಿದ್ದರು ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ವಿಜಯನಗರದಿಂದ ಗುಂಟೂರಿಗೆ ತೆರಳುತ್ತಿದ್ದ ಬಸ್ಸಿನಲ್ಲಿ ಇಷ್ಟೊಂದು ಮೊತ್ತದ ನಗದನ್ನು ತೆಗೆದುಕೊಂಡು ಹೋಗಿರುವ ಬಗ್ಗೆ ಹಲವು ಅನುಮಾನಗಳಿವೆ.
ಪ್ರಯಾಣಿಕರ ಆಸನಗಳ ಕೆಳಗೆ ಹಣವನ್ನು ಸಾಗಿಸುತ್ತಿದ್ದರಿಂದ ಇದು ಕಪ್ಪು ಹಣ ಎಂದು ಪೊಲೀಸರು ಶಂಕಿಸಿದ್ದಾರೆ. ಹಣ ವರ್ಗಾವಣೆ ವಿಚಾರ ಚಾಲಕ ಹಾಗೂ ಕ್ಲೀನರ್ಗೆ ಗೊತ್ತಿದೆಯೇ ಎಂಬ ಪ್ರಶ್ನೆಗಳು ಮೂಡುತ್ತಿವೆ. ವಿಜಯನಗರದಿಂದ ಗುಂಟೂರಿಗೆ ತೆರಳುತ್ತಿದ್ದ ಬಸ್‌ನಲ್ಲಿ ಯಾವಾಗ ಮತ್ತು ಎಲ್ಲಿ ನಗದು ಜಮಾ ಮಾಡಲಾಗಿದೆ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವಿಜಯನಗರದಲ್ಲಿಯೇ ಬಸ್ ಲೋಡ್ ಮಾಡಲಾಗಿದೆಯೇ ಅಥವಾ ನಡುರಸ್ತೆಯಲ್ಲಿ ಬಸ್‌ನಲ್ಲಿ ಹಣ ಇಡಲಾಗಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.