Breaking News
Bengaluru: Buses remain parked at Majestic Bus stand in Bengaluru during a total Sunday lockdown -- fourth of the total five -- to fight the coronavirus pandemic as part of Unlock 2.0, shutting everything except essential services, being observed across Karnataka on July 26, 2020. (Photo: IANS)

ಸಗಟು ಡೀಸೆಲ್ ದರ ಏರಿಕೆ: ಸಾರಿಗೆ ಸಂಸ್ಥೆಗಳಿಗೆ ₹2.17 ಕೋಟಿ ಹೊರೆ

Spread the love

ಬೆಂಗಳೂರು: ಸಗಟು ಲೆಕ್ಕದಲ್ಲಿ ಡೀಸೆಲ್ ಖರೀದಿ ದರ ಏರಿಕೆಯಾಗಿರುವುದು ಮೊದಲೇ ಸಂಕಷ್ಟದಲ್ಲಿರುವ ಸಾರಿಗೆ ಸಂಸ್ಥೆಗಳನ್ನು ಇನ್ನಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ. ಇದರಿಂದಾಗಿ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ, ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಗಳಿಗೆ ದಿನಕ್ಕೆ ₹2.17 ಕೋಟಿ ಹೆಚ್ಚುವರಿ ಹೊರೆ ಆಗಲಿದೆ.

ಪ್ರತಿನಿತ್ಯ ಕೆಎಸ್‌ಆರ್‌ಟಿಸಿಗೆ 5.30 ಲಕ್ಷ ಲೀಟರ್, ಬಿಎಂಟಿಸಿಗೆ 2.06 ಲಕ್ಷ ಲೀಟರ್, ಎನ್‌ಡಬ್ಲ್ಯುಕೆಆರ್‌ಟಿಸಿಗೆ 2.82 ಲಕ್ಷ ಲೀಟರ್ ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಗೆ 2.50 ಲಕ್ಷ ಲೀಟರ್ ಡೀಸೆಲ್‌ ಬೇಕಾಗುತ್ತದೆ.

ಕೆಎಸ್‌ಆರ್‌ಟಿಸಿ ನಿತ್ಯದ ವರಮಾನ ₹7 ಕೋಟಿ ಇದ್ದರೆ ಡೀಸೆಲ್‌ಗೇ ₹5 ಕೋಟಿ ಖರ್ಚಾಗುತ್ತಿತ್ತು.

ಈಗ ಹೆಚ್ಚುವರಿಯಾಗಿ ₹86.60 ಲಕ್ಷ ಹೊರೆ ಆಗಿದೆ. ಬಿಎಂಟಿಸಿ ನಿತ್ಯದ ವರಮಾನ ₹3.10 ಕೋಟಿ ಇದ್ದರೆ ಡೀಸೆಲ್‌ಗೆ ₹2.10 ಕೋಟಿ ಖರ್ಚಾಗುತ್ತಿತ್ತು. ಈಗ ₹35 ಲಕ್ಷ ಹೆಚ್ಚುವರಿಯಾಗಿ ಸೇರಿಕೊಂಡಿದೆ. ಎನ್‌ಡಬ್ಲ್ಯುಕೆಆರ್‌ಟಿಸಿಗೆ ₹48.97 ಲಕ್ಷ ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಗೆ ₹43.41 ಲಕ್ಷ ಹೆಚ್ಚುವರಿ ಡೀಸೆಲ್‌ ವೆಚ್ಚ ಹೊರೆಯಾಗಿದೆ.

ಈ ನಷ್ಟದಿಂದ ಪಾರು ಮಾಡಲು ಕೋರಿ ನಾಲ್ಕೂ ಸಾರಿಗೆ ಸಂಸ್ಥೆಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿವೆ. ಆದರೂ, ಪ್ರಯಾಣ ದರ ಹೆಚ್ಚಳ ಮಾಡುವ ಸಾಧ್ಯತೆಗಳಿಲ್ಲ.


Spread the love

About Laxminews 24x7

Check Also

ದೇಶದಲ್ಲೇ ಹೆಚ್ಚು ಸಕ್ಕರೆ ಕಾರ್ಖಾನೆ ಹೊಂದಿದ ಜಿಲ್ಲೆಗಳಲ್ಲಿ ಬೆಳಗಾವಿ ಮುಂಚೂಣಿಯಲ್ಲಿದೆ: ಸಚಿವ ಸತೀಶ್‌ ಜಾರಕಿಹೊಳಿ

Spread the love ದೇಶದಲ್ಲೇ ಹೆಚ್ಚು ಸಕ್ಕರೆ ಕಾರ್ಖಾನೆ ಹೊಂದಿದ ಜಿಲ್ಲೆಗಳಲ್ಲಿ ಬೆಳಗಾವಿ ಮುಂಚೂಣಿಯಲ್ಲಿದೆ: ಸಚಿವ ಸತೀಶ್‌ ಜಾರಕಿಹೊಳಿ ನ್ಯೂಸ್​ಫಸ್ಟ್​ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ