ಲಾತೂರು(ಮಹಾರಾಷ್ಟ್ರ): ಹಾವಿನ ದ್ವೇಷ 12 ವರ್ಷ ಎನ್ನುತ್ತಾರೆ. ಆದರೆ ಅಲ್ಲಲ್ಲಿ ಕೆಲವೊಂದು ಘಟನೆಗಳನ್ನು ನೋಡಿದರೆ ಮೈ ಝುಂ ಎನ್ನುವುದು ಉಂಟು. ಒಂದೇ ಹಾವು ಪದೇ ಪದೇ ಬಂದು ಒಬ್ಬ ವ್ಯಕ್ತಿಯನ್ನು ಕಚ್ಚುವ ಘಟನೆಗಳು ಆಗಾಗ್ಗೆ ವರದಿಯಾಗುತ್ತಲೇ ಇಎಉತ್ತವೆ.
ಆದರೆ ಅಚ್ಚರಿ ಮಹಾರಾಷ್ಟ್ರದ ಲಾತೂರಿನಲ್ಲಿ ವ್ಯಕ್ತಿಯೊಬ್ಬನಿಗೆ ಇದಾಗಲೇ 500ಕ್ಕೂ ಅಧಿಕ ಬಾರಿ ಹಾವು ಬಂದು ಕಚ್ಚಿದೆ. ಅನೇಕ ಜನರು ಒಟ್ಟಿಗೆ ಕೆಲಸ ಮಾಡ್ತಿದ್ದ ಸಂದರ್ಭದಲ್ಲೂ ಅಂದರೆ ಜನ ನಿಬಿಡ ಪ್ರದೇಶದಲ್ಲಿಯೂ ಈತನಿಗೆ ಮಾತ್ರ ಹಾವು ಕಚ್ಚಿರುವ ಘಟನೆಗಳು ನಡೆದಿವೆ.
ಇಂಥದ್ದೊಂದು ಹಾವಿನ ಕಡಿತಕ್ಕೆ ಒಳಗಾಗುತ್ತಿರುವ ವ್ಯಕ್ತಿಯ ಹೆಸರು ಅನಿಲ್ ತುಕಾರಾಂ ಗಾಯಕ್ವಾಡ್ . ಲಾತೂರು ಜಿಲ್ಲೆಯ ಔಸಾ ಪಟ್ಟಣದಲ್ಲಿ ವಾಸವಾಗಿರುವ 45 ವರ್ಷದ ಅನಿಲ್, ಕೃಷಿ ಕಾರ್ಮಿಕನಾಗಿದ್ದು, ಕೂಲಿ ಕೆಲಸಕ್ಕಾಗಿ ಬೇರೆಯವರ ಜಮೀನುಗಳಿಗೆ ಹೋಗುತ್ತಾರೆ. ಈ ವೇಳೆ ಆತನಿಗೆ ಹಾವುಗಳು ಕಚ್ಚುತ್ತಿವೆ.
ಕಳೆದ 15 ವರ್ಷಗಳಿಂದ ಈ ಘಟನೆ ನಡೆಯುತ್ತಿದ್ದು, ಅನೇಕ ಸಲ ಚಿಕಿತ್ಸೆ ಪಡೆದು ಜೀವ ಉಳಿಸಿಕೊಂಡಿದ್ದಾರೆ ಅನಿಲ್. ಈ ಕುರಿತು ನೂರಾರು ಸಲ ಚಿಕಿತ್ಸೆ ನೀಡಿರುವ ವೈದ್ಯ ಡಾ. ಸಚ್ಚಿದಾನಂದ ರಣದಿವೆ ಮಾತನಾಡಿ, ಜನಸಂದಣಿಯಲ್ಲಿ ಕೆಲಸ ಮಾಡ್ತಿದ್ದಾಗ ಕೂಡ ಹಾವುಗಳು ಈತನಿಗೆ ಕಚ್ಚುತ್ತಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ನಾನು ಇಲ್ಲಿಯವರೆಗೆ ಅನಿಲ್ಗೆ 150ಕ್ಕೂ ಅಧಿಕ ಸಲ ಚಿಕಿತ್ಸೆ ನೀಡಿದ್ದೇನೆ ಎಂದಿದ್ದಾರೆ. ಇದಕ್ಕೆ ಕಾರಣ ಮಾತ್ರ ನಿಗೂಢ.
Laxmi News 24×7