ಬೆಳಗಾವಿ: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದ ಮೇನ್ ಪಿಐಎಲ್ ಡಿಸ್ಮಿಸ್ ಆಗಿದೆ. ಮ್ಯಾಜಿಸ್ಟೇಟ್ ಕೋರ್ಟ್‍ಗೆ ರಿಪೋರ್ಟ್ ಸಬ್ಮಿಟ್ ಆಗಿದೆ. ಹೀಗಾಗಿ ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ಪಡೆಯಲು ಯಾವುದೇ ಅಡೆತಡೆಗಳಿಲ್ಲ ಎಂದು ಸಹೋದರ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲಾಸ್ಟ್ ಟೈಮ್ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಆದ ಮೇಲೆ ಅದನ್ನೇ ನೆಪ ಇಟ್ಟುಕೊಂಡು ರಿಸೈನ್ ಮಾಡಿಸಿದರು. ಆದರೀಗ ಕೋರ್ಟ್‍ನಲ್ಲಿ ಕೇಸ್ ಮುಗಿಯುತ್ತದೆ. ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಕಡೆಯ ವಕೀಲರು ಹೈಕೋರ್ಟ್‍ನಲ್ಲಿ ಮೇನ್ ಪಿಐಎಲ್ ಆರ್ಡರ್ ಆದಮೇಲೆ ಹೈಕೋರ್ಟ್‍ನಿಂದ ಸುಪ್ರೀಂ ಕೋರ್ಟ್‍ಗೆ ಹೋದರು. ಆದರೆ ಸುಪ್ರೀಂ ಕೋರ್ಟ್‍ನಲ್ಲಿ ಮತ್ತೆ ವಾಪಸ್ ಹೈಕೋರ್ಟ್‍ನಲ್ಲಿ ನಿರ್ಣಯ ಕೈಗೊಳ್ಳುವಂತೆ ತಿಳಿಸಿದ್ದಾರೆ. ಈಗಾಗಲೇ ಕಳೆದ 10ರಂದು ಸಿಡಿ ಪ್ರಕರಣಕ್ಕೆ ಸಂಬಂಧಿಸಿದ ಮೇನ್ ಪಿಐಎಲ್ ಕೂಡ ಡಿಸ್ಮಿಸ್ ಆಗಿದೆ. ಮ್ಯಾಜಿಸ್ಟ್ರೇಟ್ ಕೋರ್ಟ್‍ನಲ್ಲಿ ಬಿ-ರಿಪೋರ್ಟ್ ಸಬ್ಮಿಟ್ ಆಗಿದೆ. ಬಿ ರಿಪೋರ್ಟ್‍ನಲ್ಲಿ ಟ್ರ್ಯಾಪ್ ಅಂತ ಇದೆ. ಹೀಗಾಗಿ ರಮೇಶ್ ಜಾರಕಿಹೊಳಿ ಅವರದ್ದು ಸದ್ಯ ಕೋರ್ಟ್‍ನಲ್ಲಿ ಯಾವುದೇ ಕೇಸ್‍ಗಳಿಲ್ಲ. ಸಣ್ಣಪುಟ್ಟ ಎಫ್‍ಐಆರ್ ಪಾಸಿಂಗ್ ಕೇಸ್‍ಗಳಿವೆ. ಅದಕ್ಕೂ ಇದಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಹೇಳಿದರು.ಕೋರ್ಟ್‍ನಲ್ಲಿ ರಮೇಶ್ ಜಾರಕಿಹೊಳಿ ಸಿಡಿ ಕೇಸ್ ಕ್ಲಿಯರ್ ಆಗಿದೆ. ಪಕ್ಷದಲ್ಲೂ ಕೂಡ ಸಿಡಿ ಕೇಸ್ ಕ್ಲಿಯರ್ ಆದಮೇಲೆ ಸಂಪುಟಕ್ಕೆ ಸೇರಿಸಿಕೊಳ್ಳುತ್ತೇವೆ ಅಂತ ಹೇಳಿದರು. ಈಗ ರಮೇಶ್ ಜಾರಕಿಹೊಳಿ ಕೇಸ್ ಕ್ಲಿಯರ್ ಆಗಿದೆ. ರಮೇಶ್ ಜಾರಕಿಹೊಳಿ ಸಚಿವ ಸ್ಥಾನ ಪಡೆಯಲು ಯಾವುದೇ ಅಡೆತಡೆಗಳಿಲ್ಲ. ರಮೇಶ್‍ಗೆ ಆದಷ್ಟು ಬೇಗ ಒಳ್ಳೆಯದು ಆಗಲಿ ಅಂತ ನಾನು ಹಾರೈಸುತ್ತೇನೆ ಎಂದರು