ಬೆಂಗಳೂರು: ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಕಟ್ಟುಕಥೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಕಿಡಿಕಾರಿರುವ ಶಾಸಕ ಪಿ.ರಾಜೀವ್, ಕಾಂಗ್ರೆಸ್ ನವರಿಗೆ ಇನ್ನೊಬ್ಬರ ಸಾವು ಕಟ್ಟುಕಥೆ ಆಗುತ್ತೆ. ಅದೇ ನಿಮ್ಮ ಮನೆಯವರಿಗೆ ಅಂತಹ ಸ್ಥಿತಿ ಬಂದಿದ್ದರೆ ಏನೆಂದು ಮಾತನಾಡುತ್ತಿದ್ದಿರಿ ಎಂದು ಪ್ರಶ್ನಿಸಿದ್ದಾರೆ.
ಕಾಶ್ಮೀರಿ ಪಂಡಿತರನ್ನು ರಾತ್ರೋರಾತ್ರಿ ಅಲ್ಲಿಂದ ಓಡಿಸಿದರು. ಆ ಕ್ಷಣದಲ್ಲಿ ನಿಮ್ಮ ಕುಟುಂಬದವರು ಅಲ್ಲಿ ಇದ್ದಿದ್ದರೆ ಏನು ಮಾಡ್ತಿದ್ರಿ? ನಿಮ್ಮ ಹೆಂಡತಿಯೋ ಸಂಬಂಧಿಕರೋ ಅಲ್ಲಿ ಇದ್ದಿದ್ದರೆ ಏನಾಗುತಿತ್ತು? ಆಗ ಹೀಗೆ ಹೇಳಿಕೆ ಕೊಡುತ್ತಿದ್ದರೇ ಎಂದು ಕೇಳಿದ್ದಾರೆ.
ರಾಜಕೀಯ ಬೇಕು, ಆದರೆ ಮಾತನಾಡುವಾಗ ಮಾನವೀಯತೆ ಇರಲಿ. ಹೃದಯಹೀನ, ವಿಕೃತ ಮನಸ್ಸಿನವರು ಹೀಗೆ ಹೇಳುತ್ತಾರೆ. ಕಾಂಗ್ರೆಸ್ ನವರು ಅದೇ ಮನಸ್ಥಿತಿ ಹೊಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.