Breaking News

ಪತ್ನಿ ಮಾಂಸದ ಅಡುಗೆ ಮಾಡಿಲ್ಲ’: 100 ನಂಬರ್​ಗೆ 6 ಬಾರಿ ಕರೆ ಮಾಡಿದ ವ್ಯಕ್ತಿ..

Spread the love

ನಲ್ಗೊಂಡ(ತೆಲಂಗಾಣ) ಸಾಮಾನ್ಯವಾಗಿ ಅಪಘಾತ ಮತ್ತು ಅಪರಾಧ ನಡೆದ ಸಂದರ್ಭದಲ್ಲಿ ನಾವು ತುರ್ತಾಗಿ ‘100’ ನಂಬರ್​ಗೆ ಕರೆ ಮಾಡುತ್ತೇವೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಪತ್ನಿ ಹೋಳಿ ಹಬ್ಬದಂದು ಮಾಂಸದ ಅಡುಗೆ ಮಾಡಲಿಲ್ಲ ಎಂದು 100 ನಂಬರ್​ಗೆ 6 ಬಾರಿ ಕರೆ ಮಾಡಿ, ಪೊಲೀಸರ ಅತಿಥಿಯಾಗಿದ್ದಾನೆ.

ಈ ವಿಚಿತ್ರ ಘಟನೆ ನಡೆದಿರುವುದು ತೆಲಂಗಾಣದ ನಲ್ಗೊಂಡ ಜಿಲ್ಲೆಯ ಕನಗಲ್ ಮಂಡಲದ ಚರ್ಲ ಗೌರಾರಾಮ್​ ಗ್ರಾಮದಲ್ಲಿ. ಹೋಳಿ ಹಬ್ಬದಂದು ನವೀನ್ ಎಂಬಾತ ತನ್ನ ಮನೆಗೆ ಮಾಂಸವನ್ನು ತಂದಿದ್ದು, ಪತ್ನಿ ಆ ಮಾಂಸದಿಂದ ಅಡುಗೆ ಮಾಡಿರಲಿಲ್ಲ. ಇದರಿಂದಾಗಿ ಕುಡಿದ ಮತ್ತಿನಲ್ಲಿ 100 ನಂಬರ್​ಗೆ ಆರು ಬಾರಿ ಕರೆ ಮಾಡಿ, ಪತ್ನಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಹೇಳಿದ್ದಾನೆ.

ಶುಕ್ರವಾರ ಸಂಜೆ ಈ ಘಟನೆ ನಡೆದಿದ್ದು, ಪೊಲೀಸರ ಅತ್ಯಮೂಲ್ಯ ಸಮಯ ಹಾಳು ಮಾಡಿದ ಆರೋಪದ ಮೇಲೆ ವ್ಯಕ್ತಿ ವಿರುದ್ಧ ಕೇಸ್​ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ನಾಗೇಶ್ ತಿಳಿಸಿದ್ದಾರೆ.


Spread the love

About Laxminews 24x7

Check Also

20 ವರ್ಷಗಳಿಂದ ಕಳ್ಳತನ: ಕುಖ್ಯಾತ ಖದೀಮ ಬೆಂಗಳೂರು ಪೊಲೀಸರ ಬಲೆಗೆ

Spread the loveಬೆಂಗಳೂರು: ಕಳ್ಳತನವನ್ನೇ ಕಾಯಕ ಮಾಡಿಕೊಂಡು ಹಾಡಹಾಗಲೇ ಮನೆಗಳ್ಳತನ ಮಾಡುತ್ತಿದ್ದ ಕುಖ್ಯಾತ ಖದೀಮನೋರ್ವ ಇಲ್ಲಿನ ವಿದ್ಯಾರಣ್ಯಪುರ ಪೊಲೀಸರ ಬಲೆಗೆ ಬಿದ್ದಿದ್ಧಾನೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ