ಬೆಂಗಳೂರು: ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ನಂತರ ಆಮ್ ಆದ್ಮಿ ಪಕ್ಷ ಇದೀಗ ಅರವಿಂದ್ ಕೇಜ್ರಿವಾಲ್ ಅವರ ದೆಹಲಿ ಮಾದರಿಯನ್ನು 2023ರ ಕರ್ನಾಟಕ ವಿಧಾನಸಭಾ ಚುನಾವಣೆ ಸೇರಿದಂತೆ ದೇಶದ ಇತರೆಡೆ ಹರಡಲು ಎದುರು ನೋಡುತ್ತಿದೆ.
ಮಾರ್ಚ್ 10 ರಂದು ಪಂಜಾಬ್ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟಗೊಂಡ ನಂತರ ಬೆಂಗಳೂರು ನಗರದಲ್ಲಿ ಎಎಪಿಗೆ ಮೂರು ಪಟ್ಟು ಬೆಂಬಲ ಹೆಚ್ಚಾಗಿದೆ.
ಸರ್ವೆಯಲ್ಲಿ ಮುಂದಿನ ಚುನಾವಣೆಯಲ್ಲಿ ಎಎಪಿಯನ್ನು ಆತ್ಮ ಪಕ್ಷವಾಗಿ ಆಯ್ಕೆ ಮಾಡಲು ಬೆಂಗಳೂರಿಗೆ ಒಲುವ ತೋರಿದ್ದಾರೆ ಎಂದು ರಾಜ್ಯ ಎಎಪಿ ಸಂಚಾಲಕ ಪೃಥ್ವಿ ರೆಡ್ಡಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಹೇಳಿದ್ದಾರೆ.
ಈ ಹಿಂದೆ ಎಎಪಿ ಸ್ವಯಂ ಸೇವಕರು ಬೆಂಗಳೂರಿನಲ್ಲಿ ಮನೆ ಮನೆಗೆ ತೆರಳಿ ತಮ್ಮನ್ನು ಪರಿಚಯಿಸಿಕೊಂಡಿದ್ದರು. ಈಗ ಜನರು ಗುರುತಿಸುತ್ತಿದ್ದಾರೆ. ಎಎಪಿ ಪಕ್ಷಕ್ಕೆ ಸ್ವಾಗತ ಕೋರುತ್ತಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಪಕ್ಷ ಹೋರಾಟ ನಡೆಸುತ್ತಿದೆ. ಭ್ರಷ್ಟಾಚಾರ ಮಾತ್ರವಲ್ಲದೇ, ಶಿಕ್ಷಣ, ಆರೋಗ್ಯ, ನೀರು, ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ನಾವು ಜನರತ್ತ ತೆರಳುತ್ತಿದ್ದೇವೆ ಎಂದು ಅವರು ತಿಳಿಸಿದರು.
ಕರ್ನಾಟಕ ಎಎಪಿ ಪ್ರಕಾರ, ಮುಂಬರುವ ಬಿಬಿಎಂಪಿ ಚುನಾವಣೆಗೆಗಾಗಿ ನಿಧಿ ಸಂಗ್ರಹ ಅಭಿಯಾನವನ್ನು ಆರಂಭಿಸಲಾಗಿದೆ. ಚುನಾವಣೆಗಾಗಿ ನಿಧಿ ಸಂಗ್ರಹಕ್ಕಾಗಿ ಹೋಟೆಲ್ ಚಾನ್ಸಲರಿ ಫೆವಿಲಿಯನ್ ನಲ್ಲಿ ಇಂದು ಬೆಳಗ್ಗೆ 11 ಗಂಟೆಯಿಂದ 1 ಗಂಟೆಯವರೆಗೂ ಈ ಅಭಿಯಾನ ನಡೆಯಲಿದೆ. ಆನ್ ಲೈನ್ ಮತ್ತು ಚೆಕ್ ಮೂಲಕ ದೇಣಿಗೆ ಸಂಗ್ರಹಿಸಲಾಗುವುದು ಎಂದು ಪ್ರಕಾಶ್ ನೆಡುಂಗಾಡಿ ಹೇಳಿದರು.