ಬಾಗಲಕೋಟೆ : ಅಪ್ಪು ಹುಟ್ಟು ಹಬ್ಬ ಹಾಗೂ ಜೇಮ್ಸ್ ಚಿತ್ರ ಬಿಡುಗಡೆ ಹಿನ್ನೆಲೆ ಇಡೀ ರಾಜ್ಯಾದ್ಯಂತ ಸಂಭ್ರಮ ಮನೆ ಮಾಡಿದೆ. ಎಲ್ಲೆಡೆ ಅಭಿಮಾನಿಗಳು ತಮ್ಮ ಮನೆಯ ಹಬ್ಬದಂತೆ ಸಂಭ್ರಮಿಸುತ್ತಿದ್ದಾರೆ.ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಪೋಚಾಪೂರ ಗ್ರಾಮದ ಭೀಮಣ್ಣ ಉಪ್ಪಾರ ಎಂಬುವರು ತಮ್ಮ ಇಂತಹ ವಿಶಿಷ್ಟ ಕಲೆಯಿಂದ ಗಮನ ಸೆಳೆದಿದ್ದಾರೆ.
ತೆಂಗಿನ ಗೆರೆಯ ನೆರಳಿನಲ್ಲಿ ಮತ್ತು ಆಕಾಶದಲ್ಲಿ ಹಿಡಿದಾಗ ಮಾತ್ರ ಭಾವ ಚಿತ್ರ ಕಾಣುವ ರೀತಿಯಲ್ಲಿ ಮಾಡಿದ್ದಾರೆ. ತನ್ನ ಅಧ್ಯಯನ ಸಮಯದಲ್ಲಿ ಇಂತಹ ಹವ್ಯಾಸ ಬೆಳೆಸಿಕೊಂಡು ಬಂದಿದ್ದಾರೆ. ತೆಂಗಿನ ಗರಿಯಲ್ಲಿ ಕಟರ್ ಮೂಲಕ ಕಟ್ ಮಾಡಿ, ಪುನೀತ್ ರಾಜಕುಮಾರ್ ಚಿತ್ರ ಬಿಡಿಸಿದ್ದಾರೆ.