ಹೋಳಿ ಹಬ್ಬಕ್ಕೂ ಮೊದಲೇ ಕೇಂದ್ರ ಸರ್ಕಾರಿ ನೌಕರರಿಗೆ ಖುಷಿ ಸುದ್ದಿ ಸಿಗುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರ, 7ನೇ ವೇತನ ಆಯೋಗದ ಅಡಿಯಲ್ಲಿ ಉದ್ಯೋಗಿಗಳ ತುಟ್ಟಿಭತ್ಯೆ ಹೆಚ್ಚಳದ ಬಗ್ಗೆ ಘೋಷಣೆ ಮಾಡಬಹುದು. ಇಂದು ನಡೆಯಲಿರುವ ಕೇಂದ್ರ ಸಂಪುಟ ಸಭೆಯಲ್ಲಿ ಇದನ್ನು ಪ್ರಕಟಿಸುವ ನಿರೀಕ್ಷೆಯಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವ ಸಂಪುಟ ಸಭೆ ನಡೆಯಲಿದೆ. ಸಭೆಯಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಮತ್ತು ಡಿಯರ್ನೆಸ್ ರಿಲೀಫ್ ಹೆಚ್ಚಳ ಮಾಡುವ ಕುರಿತ ಚರ್ಚೆಯನ್ನು ಅನುಮೋದಿಸಬಹುದು. ಸರ್ಕಾರ ತುಟ್ಟಿಭತ್ಯೆಯನ್ನು ಶೇ.3 ರಷ್ಟು ಹೆಚ್ಚಿಸಬಹುದು ಎಂದು ನಿರೀಕ್ಷಿಸಲಾಗಿದೆ.
ಪ್ರಸ್ತುತ ತುಟ್ಟಿಭತ್ಯೆ ಶೇ.31 ರಷ್ಟಿದೆ. ಶೇ.3 ರಷ್ಟು ಏರಿಕೆಯಾದ ನಂತರ ಡಿಎ ಶೇ.34 ಕ್ಕೆ ತಲುಪಲಿದೆ. ಸರ್ಕಾರ ಈ ನಿರ್ಧಾರ ಕೈಗೊಂಡರೆ 50 ಲಕ್ಷಕ್ಕೂ ಹೆಚ್ಚು ಕೇಂದ್ರ ನೌಕರರು ಮತ್ತು 65 ಲಕ್ಷಕ್ಕೂ ಹೆಚ್ಚು ಪಿಂಚಣಿದಾರರಿಗೆ ಅನುಕೂಲವಾಗಲಿದೆ. ಡಿಎ ಹೆಚ್ಚಿಸುವ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡರೆ, 2022 ರ ಜನವರಿ 1ರಿಂದ್ಲೇ ಅನ್ವಯವಾಗಲಿದೆ. ಹೆಚ್ಚಿದ ವೇತನ ಮತ್ತು ಬಾಕಿ ಹಣ ಅತಿ ಶೀಘ್ರದಲ್ಲಿ ಉದ್ಯೋಗಿಗಳ ಖಾತೆಗೆ ಜಮಾ ಆಗಲಿದೆ.