ಮಾ.17ರಂದು ಭಾರತ ಮಾತ್ರವಲ್ಲದೇ ಇತರೆ ಅನೇಕ ದೇಶಗಳಲ್ಲೂ ‘ಜೇಮ್ಸ್’ ಸಿನಿಮಾ ಬಿಡುಗಡೆ ಆಗುತ್ತಿದೆ. ಈ ಬಗ್ಗೆ ವಿತರಕ ಕಿರಣ್ ನೀಡಿದ ಮಾಹಿತಿ ಇಲ್ಲಿದೆ..‘ಪವರ್ ಸ್ಟಾರ್’ ಪುನೀತ್ ರಾಜ್ಕುಮಾರ್ (Puneeth Rajkumar) ನಟನೆಯ ‘ಜೇಮ್ಸ್’ ಸಿನಿಮಾದ ಬಿಡುಗಡೆಗೆ ದಿನಗಣನೆ ಶುರುವಾಗಿದೆ.
ಈ ಚಿತ್ರವನ್ನು ಅಭಿಮಾನಿಗಳು (Puneeth Rajkumar Fans) ಕಣ್ತುಂಬಿಕೊಳ್ಳಲು ಎರಡೇ ದಿನ ಬಾಕಿ ಇದೆ. ಕರ್ನಾಟಕದಲ್ಲಿ ಮಾತ್ರವಲ್ಲದೇ ವಿಶ್ವಾದ್ಯಂತ ‘ಜೇಮ್ಸ್’ ಚಿತ್ರವನ್ನು ಬಿಡುಗಡೆ ಮಾಡಲಾಗುತ್ತಿದೆ. ಕೆನಡಾದಲ್ಲಿ ನೆಲೆಸಿರುವ ಕನ್ನಡಿಗ ಕಿರಣ್ ಅವರು ವಿದೇಶದಲ್ಲಿ ವಿತರಣೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.