ಬೆಂಗಳೂರು: ತಾಜ್ ವೆಸ್ಟೆಂಡ್‍ನಲ್ಲಿ ನಾನು ರಾಸಲೀಲೆ ಮಾಡಲು ಹೋಗುತ್ತಿರಲಿಲ್ಲ ಎಂದು ಸಚಿವ ಸಿ.ಪಿ ಯೋಗೇಶ್ವರ್ ವಿರುದ್ಧ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಕುಮಾರಸ್ವಾಮಿಯವರು 14 ತಿಂಗಳು ತಾಜ್ ವೆಸ್ಟೆಂಡ್ ಹೊಟೆಲ್‍ನಲ್ಲಿದ್ದರು ಎಂಬ ಯೋಗೇಶ್ವರ ಹೇಳಿಕೆ ವಿಚಾರವಾಗಿ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಅವರು, ನಾನು ಸರ್ಕಾರಿ ಬಂಗಲೆ ಇರಲಿಲ್ಲ ಎನ್ನುವ ಕಾರಣಕ್ಕೆ ವಿಶ್ರಾಂತಿ ಪಡೆಯಲು ಆ ಹೊಟೆಲ್‍ಗೆ ಹೋಗುತ್ತಿದ್ದೆ. ಈಗಲೂ ನಾನು ತಾಜ್ ವೆಸ್ಟ್ ಹೊಟೆಲ್‍ಗೆ ಹೋಗುತ್ತಿರುತ್ತೇನೆ. ನನ್ನದು ತೆರೆದ ಪುಸ್ತಕ ಎಂದು ತಿರುಗೇಟು ನೀಡಿದರು.ನನ್ನ ಪಿಎ ಈಗಲೂ ಆ ಹೊಟೆಲ್‍ನಲ್ಲಿಯೇ ಇರುತ್ತಾರೆ. ನಾನು ಒಬ್ಬನೆ ಅಲ್ಲ ನನ್ನ ಜೊತೆ ಸಾ.ರಾ ಮಹೇಶ್ ಅವರು ಕೂಡಾ ಇರುತ್ತಿದ್ದರು. ಇದನ್ನೇಲ್ಲಾ ಇವನ ಹತ್ತಿರ ನೋಡಿ ಕಲಿಯಬೇಕಿತ್ತಾ? ನಾವೆಲ್ಲಾ ಹೋಟೆಲ್‍ನಲ್ಲಿದ್ದರೆ ಇವನೇನು ಗುಡಿಸಲಲ್ಲಿ ಇರುತ್ತಿದ್ದನಾ? ಇವನ ಬಗ್ಗೆ ನನಗೆ ಗೊತ್ತಿಲ್ಲವಾ ಇಲ್ಲೆ ಯು.ಬಿ ಸಿಟಿ ಪಕ್ಕದಲ್ಲಿ ಇವನು ಇದ್ದನು. ನನ್ನದು ಕದ್ದು ಮುಚ್ಚಿ ಯಾವುದೂ ಇಲ್ಲ ಎಂದರು.
Laxmi News 24×7