ಬೆಂಗಳೂರು: ಒಂದೇ ಹುಡುಗಿಯ ಮೇಲೆ ಇಬ್ಬರು ಹುಡುಗರು ಕಣ್ ಹಾಕಿದ್ರು. ಆ ಹುಡುಗಿಯನ್ನ ಮನವೊಲಿಸಿಕೊಳ್ಳೋ ಪೈಪೋಟಿಯಲ್ಲಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಆರೋಪಿಗಳ ಬೆನ್ನುಬಿದ್ದ ಪೊಲೀಸರು, ಕೊಲೆಯಾದ ಕೆಲವೇ ಗಂಟೆಗಳಲ್ಲಿ ಆರೋಪಿಗಳ ಕಾಲಿಗೆ ಗುಂಡು ಹೊಡೆದು ಬಂಧಿಸಿದ ಘಟನೆ ನಡೆದಿದೆ.
ಕೆಜಿ ಹಳ್ಳಿ ನಿವಾಸಿ ಉಸ್ಮಾನ್ ಹಾಗೂ ಮೋಹಿನ್ ಇಬ್ಬರೂ ಅದೇ ಏರಿಯಾದ ಹುಡುಗಿಯನ್ನು ಇಷ್ಟಪಡುತ್ತಿದ್ದರಂತೆ. ಇಬ್ಬರ ನಡುವೆ ಇದೇ ವಿಚಾರಕ್ಕೆ ಕಿರಿಕ್ ನಡೀತಾನೇ ಇತ್ತು. ಇಬ್ಬರು ಸಿನಿಮಾ ಸ್ಟೈಲ್‍ನಲ್ಲಿ ಒಬ್ಬರಿಗೊಬ್ಬರು ವಾರ್ನ್ ಮಾಡ್ಕೋಳ್ತಿದ್ರು. ಆದರೆ ನಿನ್ನೆ ರಾತ್ರಿ ಆ ಜಗಳ ತಾರಕ್ಕೇರಿತ್ತು. ಉಸ್ಮಾನ್ ಒಬ್ಬಂಟಿಯಾಗಿ ಮೋಹಿನ್ ಗ್ಯಾಂಗ್ ಕೈಗೆ ಸಿಕ್ಕಿಬಿದ್ದಿದ್ದ. ಈ ವೇಳೆ ಮೋಹಿನ್ ಅಂಡ್ ಗ್ಯಾಂಗ್ ಜಗಳ ತೆಗೆದು ನಡುರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಉಸ್ಮಾನ್‍ನನ್ನು ಕೊಚ್ಚಿ ಕೊಲೆ ಮಾಡಿ ಎಸ್ಕೇಪ್ ಆಗಿದ್ರು.