ಲಕ್ನೋ: ಉತ್ತರ ಪ್ರದೇಶದ ಭವಿಷ್ಯ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಕೈಯಲ್ಲಿ ಸುರಕ್ಷಿತವಾಗಿರುತ್ತದೆ ಎಂದು ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾದ ಬಿಜೆಪಿ ಸಂಸದೆ ರೀಟಾ ಬಹುಗುಣ ಜೋಶಿ ಅವರ ಪುತ್ರ ಮಯಾಂಕ್ ಜೋಶಿ ಹೇಳಿದರು.
ನಾನು ಇಂದು ಸಮಾಜವಾದಿ ಪಕ್ಷಕ್ಕೆ ಸೇರಿದ್ದೇನೆ. ಅಖಿಲೇಶ್ ಯಾದವ್ ಅಭಿವೃದ್ಧಿ, ಮಹಿಳೆಯರ ಸುರಕ್ಷತೆ ಮತ್ತು ಯುವಕರ ಬಗ್ಗೆ ಮಾತನಾಡುತ್ತಾರೆ. ಯುವಕನಾಗಿದ್ದಾಗ, ಪ್ರಗತಿಪರವಾಗಿ ಮಾತನಾಡುವ ಅಂತಹ ವ್ಯಕ್ತಿಯ ಜೊತೆ ನಿಲ್ಲಲು ನಾನು ಯೋಚಿಸಿದೆ. ಉತ್ತರ ಪ್ರದೇಶದ ಭವಿಷ್ಯವು ಅವರ ಕೈಯಲ್ಲಿ ಸುರಕ್ಷಿತವಾಗಿರುತ್ತದೆ ಎಂದು ನಾನು ಭಾವಿಸುತ್ತೇನೆ ಎಂದರು.
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಕೊನೆಯ ಹಂತಕ್ಕೂ ಮುನ್ನ ಮಯಾಂಕ್ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಅವರ ಸೇರ್ಪಡೆಯನ್ನು ಎಸ್‍ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಅಜಂಗಢದಲ್ಲಿ ನಡೆದ ಚುನಾವಣಾ ರ್‍ಯಾಲಿ ವೇಳೆ ಘೋಷಿಸಿದರು.