ಮೈಸೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಾವು ಮಂಡಿಸಿದ ೨೦೨೨ನೇ ಸಾಲಿನ ಬಜೆಟ್ ಕುರಿತು ಆಂದೋಲನ ದಿನಪತ್ರಿಕೆಯಲ್ಲಿ ಪ್ರಕಟವಾದ ಕೃಷಿ ಅನುದಾನ ಕುರಿತು ಸವಿವರ ವರದಿಯನ್ನು ತಮ್ಮ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.
ಆಂದೋಲನ ಪತ್ರಿಕೆಯ ಎರಡನೇ ಪುಟದಲ್ಲಿ ‘ಕೃಷಿ ಕ್ಷೇತ್ರಕ್ಕೆ ೩೩,೭೦೦ ಕೋಟಿ ರೂ.’ ಶೀರ್ಷಿಕೆಯಡಿ ಕೃಷಿ ಅನುದಾನ ಕುರಿತು ವರದಿಗಳು ವಿವರಗಳೊಂದಿಗೆ ಪ್ರಕಟವಾಗಿತ್ತು. ಆ ವರದಿಯನ್ನು ಬಸವರಾಜ ಬೊಮ್ಮಾಯಿ ಅವರು ತಮ್ಮ ಫೇಸ್‌ಬುಕ್‌ನಲ್ಲಿ ಶೇರ್ ಮಾಡಿದ್ದಾರೆ. ಲಕ್ಷಾಂತರ ಫಾಲೋವರ್‌ಗಳು ಇರುವ ಸಿಎಂ ಫೇಸ್‌ಬುಕ್‌ನಲ್ಲಿ ಅನೇಕಾನೇಕ ಮಂದಿ ಈ ವರದಿಯನ್ನು ಓದಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ‘ಆಂದೋಲನ’ ದಿನಪತ್ರಿಕೆಯನ್ನು ಕುತೂಹಲದಿಂದ ವಲೋಕನ ಮಾಡಿದ್ದಾರೆ. ಆಂದೋಲನ’ ದಿನಪತ್ರಿಕೆಯಲ್ಲಿ ಮುಂಗಡ ಪತ್ರದ ವಿಶೇಷ ವರದಿ ಪುಟಗಳು ಮತ್ತು ವಿನ್ಯಾಸವನ್ನು ಕುರಿತು ಮೈಸೂರು ಭಾಗದಲ್ಲಿ ಓದುಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಾದೇಶಿಕ ಪತ್ರಿಕೆಯಾಗಿ ಇದು ‘ಆಂದೋಲನ’ ಇಟ್ಟಿರುವ ವಿಶಿಷ್ಟ ಹೆಜ್ಜೆ ಎಂಬುದಾಗಿ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ.