Breaking News

ಆಪರೇಷನ್ ಗಂಗಾ ಮೂಲಕ ಬೆಂಗಳೂರಿಗೆ ಬಂದ್ರು 13 ವಿದ್ಯಾರ್ಥಿಗಳು

Spread the love

ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಉಕ್ರೇನ್​​ನಲ್ಲಿ ಸಿಲುಕಿರುವ ಭಾರತೀಯರನ್ನ ಕರೆ ತರಲು ಕೇಂದ್ರ ಸರ್ಕಾರ ಆಪರೇಷನ್ ಗಂಗಾ ಕಾರ್ಯಾಚರಣೆ ಕೈಗೊಂಡಿದ್ದು, ಇಂದು 13 ವಿದ್ಯಾರ್ಥಿಗಳು ಬೆಂಗಳೂರಿಗೆ ಆಗಮಿಸಿದ್ದಾರೆ.ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧ ನಡೆಯುತ್ತಿದ್ದು, ವಿದ್ಯಾಭ್ಯಾಸಕ್ಕೆಂದು ತೆರಳಿದವರು ಉಕ್ರೇನ್​​ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂದು ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 13 ವಿದ್ಯಾರ್ಥಿಗಳು ಬಂದಿಳಿದರು. ಇವರನ್ನು ಬರಮಾಡಿಕೊಂಡ ಪೋಷಕರು ತಮ್ಮ ಮಕ್ಕಳನ್ನ ತಬ್ಬಿಕೊಂಡು ಆನಂದಭಾಷ್ಪ ಸುರಿಸಿದರು.ದೇ ವೇಳೆ ಮಾತನಾಡಿದ ವಿದ್ಯಾರ್ಥಿ ಮೋಹನ್, ಫೆ. 24 ರಂದು ನಾನು ಟಿಕೆಟ್ ಬುಕ್ ಮಾಡಿದ್ದೆ. ಆದರೆ ಕೊನೆ ಕ್ಷಣದಲ್ಲಿ ಟಿಕೆಟ್ ಕ್ಯಾನ್ಸಲ್ ಆಗಿತ್ತು. ಆನಂತರ ನಾವು ರೊಮೇನಿಯಾ ದೇಶದ ಗಡಿ ಭಾಗಕ್ಕೆ ಬಂದೆವು. ಉಕ್ರೇನ್ ದೇಶಕ್ಕೆ ಭಾರತ ಬೆಂಬಲ ನೀಡದ್ದಕ್ಕೆ ಉಕ್ರೇನ್ ಸೈನಿಕರು ನಮಗೆ ಸಹಾಯ ಮಾಡಲಿಲ್ಲ. ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದರು, ಕೊರೆಯುವ ಚಳಿಯಲ್ಲಿ ಎರಡು ದಿನ ರೊಮೇನಿಯಾ ಗಡಿ ಭಾಗದಲ್ಲಿಯೇ ಇದ್ದೆವು. ರೊಮೇನಿಯಾಗೆ ಬಂದ ನಂತರ ಅಲ್ಲಿನ ಜನರು ನಮಗೆ ಆಶ್ರಯ ಮತ್ತು ಆಹಾರ ನೀಡಿದರು ಎಂದು ತಮ್ಮ ಅನುಭವ ಹಂಚಿಕೊಂಡರು.


Spread the love

About Laxminews 24x7

Check Also

ದ್ರಾಕ್ಷಿ ಬೆಳೆಗಾರರಿಂದ ಬೇಡಿಕೆ ಈಡೇರಿಕೆಗಾಗಿ ಪ್ರತಿಭಟನೆ

Spread the love ವಿಜಯಪುರ :ದ್ರಾಕ್ಷಿ ಬೆಳೆಗಾರರಿಂದ ಬೇಡಿಕೆ ಈಡೇರಿಕೆಗಾಗಿ ಪ್ರತಿಭಟನೆ* ವಿಜಯಪುರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಕರ್ನಾಟಕ ರೈತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ