Breaking News

ಪರಿಷತ್​​​ನಲ್ಲಿ ಬಜೆಟ್ ಮಂಡಿಸಿದ ಕೋಟಾ: ಕಲಾಪ ಸೋಮವಾರಕ್ಕೆ ಮುಂದೂಡಿಕೆ

Spread the love

ಬೆಂಗಳೂರು: ವಿಧಾನ ಪರಿಷತ್​​ನಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ಮುಖ್ಯಮಂತ್ರಿಗಳ ಪರವಾಗಿ ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ ಬಜೆಟ್ ಮಂಡಿಸಿದರು. ಆಯವ್ಯಯ ಮಂಡನೆ ಆದ ಬಳಿಕ ಮಾತನಾಡಿದ ಬಿಜೆಪಿ ಸದಸ್ಯ ಎಚ್.ವಿಶ್ವನಾಥ್, ನಮಗೂ ಮುಖ್ಯಮಂತ್ರಿಗಳು ಬಜೆಟ್ ಭಾಷಣ ಓದುವುದನ್ನು ಕೇಳುವ ಆಸೆ ಇದೆ. ಮುಂದಿನ ಸಾರಿಯಾದರೂ ಇದಕ್ಕೊಂದು ಅವಕಾಶ ಕಲ್ಪಿಸಿ ಎಂದು ಸಭಾಪತಿಗಳಿಗೆ ಮನವಿ ಮಾಡಿದರು.ಇದಕ್ಕೆ ಪೂರಕವಾಗಿ ಮಾತನಾಡಿದ ಸಭಾಪತಿಗಳು, ನನಗೂ ಈ ಬಗ್ಗೆ ಆಸೆ ಇದೆ. ಈ ಬಾರಿಯೇ ಇದಕ್ಕೊಂದು ಅವಕಾಶ ಮಾಡಿಕೊಡುವ ಪ್ರಯತ್ನ ನಡೆಸಿದ್ದೆ. ಬರುವ ವರ್ಷದ ಬಜೆಟ್ ವೇಳೆಗಾದರೂ ಈ ನಿಟ್ಟಿನಲ್ಲಿ ಜಂಟಿ ಅಧಿವೇಶನ ನಡೆಸಿ ಅಲ್ಲಿಯೇ ವಿಧಾನಪರಿಷತ್ ಸದಸ್ಯರು ಕುಳಿತು ಬಜೆಟ್ ವೀಕ್ಷಿಸುವ ಅವಕಾಶ ಕಲ್ಪಿಸಲು ಪ್ರಯತ್ನ ಮಾಡುತ್ತೇನೆ. ಈ ಸಂಬಂಧ ಸಭಾಧ್ಯಕ್ಷರ ಜೊತೆ ಸಭೆ ನಡೆಸಿ ಸಮಾಲೋಚಿಸುವ ಭರವಸೆ ನೀಡಿದರು.ಇದೇ ವೇಳೆ ವಿಧಾನಪರಿಷತ್ ಹಲವು ಸದಸ್ಯರು ಎದ್ದು ನಿಂತು ರಾಜ್ಯ ಹಾಗೂ ರಾಷ್ಟ್ರದಲ್ಲಿ ಕೋವಿಡ್​​ ಪ್ರಕರಣಗಳು ಸಾಕಷ್ಟು ಕಡಿಮೆಯಾಗಿವೆ. ಇದರಿಂದ ವಿಧಾನ ಪರಿಷತ್ತಿನಲ್ಲಿ ಅಳವಡಿಸಿರುವ ಗಾಜಿನ ಶೀಟ್​​​ಗಳನ್ನು ತೆಗೆದುಹಾಕುವಂತೆ ಮನವಿ ಮಾಡಿದರು.ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಸಭಾಪತಿ ಬಸವರಾಜ್ ಹೊರಟ್ಟಿ, ಸಣ್ಣ ತಾಂತ್ರಿಕ ತಡೆ ಉಂಟಾಗಿದ್ದರಿಂದ ವಿಳಂಬವಾಗುತ್ತಿದೆ. ಸೋಮವಾರದ ವೇಳೆಗೆ ಸಾಧ್ಯವಾದಷ್ಟು ಈ ವಿಚಾರದಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.ಬಜೆಟ್ ಮಂಡನೆಯಾದ ಹಿನ್ನೆಲೆಯಲ್ಲಿ ಸಭಾಪತಿ ಬಸವರಾಜ್ ಹೊರಟ್ಟಿ ಅವರು ವಿಧಾನಪರಿಷತ್ ಕಲಾಪವನ್ನು ಸೋಮವಾರ ಬೆಳಗ್ಗೆ 11 ಗಂಟೆಗೆ ಮುಂದೂಡಿದರು.


Spread the love

About Laxminews 24x7

Check Also

ದಂಡ ಕಟ್ಟಿ ಮಾರುದ್ದದ ಚಲನ್ ಸ್ವೀಕರಿಸುತ್ತಿರುವ ವಾಹನ ಸವಾರ

Spread the loveದಾವಣಗೆರೆ: ಸಂಚಾರಿ ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡ ಪಾವತಿ ಮಾಡಲು ಸರ್ಕಾರ ಶೇ.50% ರಿಯಾಯಿತಿ ನೀಡಿತ್ತು. ಇದರಿಂದ ವಾಹನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ