ದಾವಣಗೆರೆ, ಮಾರ್ಚ್ 04; “ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷನನ್ನು ಕೊಂದು ಹಾಕಿದ ಹಂತಕರ ಮೇಲೆ ಕೋಕಾ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ಜಾಮೀನಿನ ಮೇಲೆ ಹೊರಬಾರದಂತೆ ಕ್ರಮ ಕೈಗೊಳ್ಳಬೇಕು. ಹಂತಕರನ್ನು ಗಲ್ಲಿಗೇರಿಸಬೇಕು” ಎಂದು ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಒತ್ತಾಯಿಸಿದರು.ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಂತಾಗಿದೆ. ಹರ್ಷ ಕೊಂದ ಹಂತಕರಿಗೆ ಒಂದು ವರ್ಷದಲ್ಲಿ ಶಿಕ್ಷೆಯಾಗಬೇಕು.
ವರ್ಷದೊಳಗೆ ಸೂಕ್ತ ಸಾಕ್ಷ್ಯಾಧಾರ ಸಂಗ್ರಹಿಸಿ ವಾದ, ಪ್ರತಿವಾದ ಮುಗಿದು ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗುವಂತೆ ಮಾಡಬೇಕು” ಎಂದು ಆಗ್ರಹಿಸಿದರು