Breaking News

ಧಾರವಾಡ-ಕಿತ್ತೂರು-ಬೆಳಗಾವಿ ನೂತನ ರೈಲು ಮಾರ್ಗಕ್ಕಾಗಿ 927 ಕೋಟಿ ಬಜೆಟ್: ಹೊಸ ರೈಲು ಮಾರ್ಗ, ವಿಮಾನ ಹಾರಾಟ ಘೋಷಣೆ ಎಲ್ಲೆಲ್ಲಿ?

Spread the love

ಬೆಂಗಳೂರು, ಮಾರ್ಚ್ 4: ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾರ್ಚ್ 4ರ ಮಧ್ಯಾಹ್ನ 12.30ಕ್ಕೆ ಚೊಚ್ಚಲ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಕರ್ನಾಟಕ ಸರ್ಕಾರದ 2022-23ನೇ ಸಾಲಿನ ಬಜೆಟ್ ಅಭಿವೃದ್ಧಿ ಪರವಾಗಿದ್ದು, ಪಂಚಸೂತ್ರಗಳ ಆಧಾರದ ಬಜೆಟ್ ಎಂದು ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

ನಾಗರಿಕ ವಿಮಾನಯಾನ, ರೈಲು ಯೋಜನೆಗಳಿಗೆ ಬಜೆಟ್ ನಲ್ಲಿ ಸಿಕ್ಕಿರುವ ಅನುದಾನದ ಬಗ್ಗೆ ಮುಖ್ಯಾಂಶಗಳು ಇಲ್ಲಿವೆ…

ರಾಜ್ಯದ ಎರಡನೇ ಸ್ತರದ ನಗರ, ಪಟ್ಟಣಗಳಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗೆ ಸರ್ಕಾರ ಮುಂದಾಗಿದ್ದು, ಈ ಬಗ್ಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲು ಮುಂದಾಗಿದೆ. ಇನ್ನು ರೈಲು ಯೋಜನೆಗಳಲ್ಲಿ ಹೊಸದೇನು ಕಂಡು ಬಂದಿಲ್ಲ. ಹಳೆ ಯೋಜನೆಗಳ ವಿಸ್ತರಣೆಯಾಗಿದೆ.

* ಧಾರವಾಡ-ಕಿತ್ತೂರು-ಬೆಳಗಾವಿ ನೂತನ ರೈಲು ಮಾರ್ಗಕ್ಕಾಗಿ 927 ಕೋಟಿ ರೂಪಾಯಿ ವೆಚ್ಚ ಅನುದಾನ

* 640 ಕೋಟಿ ರೂ. ವೆಚ್ಚದಲ್ಲಿ ಗದಗ-ಯಲವಿಗಿ ನೂತನ ರೈಲು ಮಾರ್ಗ ನಿರ್ಮಾಣ.

* ರಾಜ್ಯದಲ್ಲಿ 20, ನೂತನ ರೈಲ್ವೆ ಮೇಲ್ಸೇತುವೆ ನಿರ್ಮಾಣ,

* ಎರಡನೇ ಸ್ತರದ ನಗರಗಳಲ್ಲಿ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣ

* ರಾಯಚೂರಿನಲ್ಲಿ 186 ಕೋಟಿ ರೂ. ವೆಚ್ಚದಲ್ಲಿ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣ ಸ್ಥಾಪನೆ ಮಾಡಲಾಗುತ್ತದೆ.

* ಮೈಸೂರು ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆ ಮಾಡಲಾಗುತ್ತದೆ.

* ದಾವಣಗೆರೆ ಮತ್ತು ಕೊಪ್ಪಳದಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗೆ ಕಾರ್ಯ ಸಾಧ್ಯತಾ ವರದಿಯನ್ನು ತಯಾರು ಮಾಡಲಾಗುತ್ತದೆ.

* 30 ಕೋಟಿ ವೆಚ್ಚದಲ್ಲಿ ಹೆಲಿಪೋರ್ಟ್‌ಗಳ ಅಭಿವೃದ್ಧಿ,ಮಡಿಕೇರಿ, ಚಿಕ್ಕಮಗಳೂರು, ಹಂಪಿಯಲ್ಲಿ ರನ್ ವೇ ಸ್ಟಿಪ್ ಅಭಿವೃದ್ಧಿ.

ಬೆಂಗಳೂರು ಉಪನಗರ ರೈಲ್ವೆ ಯೋಜನೆ

* ಸಬ್ ಅರ್ಬನ್ ರೈಲು ಯೋಜನೆಗೆ15,267 ಕೋಟಿ ವೆಚ್ಚ ಮಂಜೂರು

* 2026ರ ವೇಳೆಗೆ 148 ಕಿ.ಮೀ. ಮಾರ್ಗ ಪೂರ್ಣಗೊಳಿಸುವ ಭರವಸೆ


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ