Breaking News

ರಷ್ಯಾ ಯುದ್ಧ ನಿಲ್ಲಿಸಲು ಹೊಸ ದಾರಿ ಹುಡುಕಿದ ಉಕ್ರೇನ್ ಅಧ್ಯಕ್ಷ

Spread the love

ಕೀವ್: ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರೆಸಿದ್ದು, ನಿರಂತರ ದಾಳಿಯಿಂದಾಗಿ ಉಕ್ರೇನ್ ಸಂಪೂರ್ಣ ಹಾನಿಗೀಡಾಗಿದೆ.

ಯುದ್ಧ ನಿಲ್ಲಿಸುವ ಕುರಿತಂತೆ ಉಭಯ ದೇಶಗಳ ನಡುವೆ ಎರಡು ಬಾರಿ ಶಾಂತಿ ಮಾತುಕತೆ, ಸಂಧಾನ ಸಭೆ ನಡೆದರೂ ಷರತ್ತುಗಳ ಕಾರಣ ಫಲಪ್ರದವಾಗಿಲ್ಲ

ಇದರ ನಡುವೆ ಪ್ರಬಲ ರಷ್ಯಾದ ನಿರಂತರ ದಾಳಿಯಿಂದಾಗಿ ಉಕ್ರೇನ್ ತೀವ್ರ ಸಂಕಷ್ಟಕ್ಕೆ ಸಿಲುಕಿದೆ.

ಉಕ್ರೇನಿಯನ್ನರ ಬೆಂಬಲ ಅಧ್ಯಕ್ಷ ಝೆಲೆನ್ ಸ್ಕಿ ಅವರಿಗೆ ಇರುವುದರಿಂದ ಕೊನೆವರೆಗೂ ಹೋರಾಟ ನಡೆಸುವುದಾಗಿ ಹೇಳಿದ್ದಾರೆ. ಆದರೆ, ರಷ್ಯಾ ಯುದ್ಧದಿಂದ ಆಗಿರುವ ಮತ್ತು ಆಗುತ್ತಿರುವ ಭಾರಿ ಹಾನಿ ಕಾರಣ ಯುದ್ಧ ನಿಲ್ಲಿಸುವ ಮಾತನಾಡಿದ್ದಾರೆ.

ರಷ್ಯಾ ಅಧ್ಯಕ್ಷ ಪುಟಿನ್ ಮತ್ತು ಝೆಲೆನ್ ಸ್ಕಿ ಮುಖಾಮುಖಿಯಾಗುವ ಸಾಧ್ಯತೆ ಇದೆ. ಪುಟಿನ್ ಜೊತೆಗೆ ಮಾತುಕತೆ ನಡೆಸಲು ಝೆಲೆನ್ ಸ್ಕಿ ಒಲವು ತೋರಿದ್ದಾರೆ. ಪುಟಿನ್ ಜೊತೆಗೆ ಮಾತನಾಡಿದರೆ ಮಾತ್ರ ಯುದ್ಧ ನಿಲ್ಲಿಸಬಹುದು. ಯುದ್ಧವನ್ನು ನಿಲ್ಲಿಸಲು ಇರುವುದು ಇದೊಂದೇ ಮಾರ್ಗ


Spread the love

About Laxminews 24x7

Check Also

ಅನಾರೋಗ್ಯದಿಂದ ತಾಯಮ್ಮ ಹುಲಿ ಸಾವು

Spread the loveಮೈಸೂರು: ಚಾಮರಾಜೇಂದ್ರ ಮೃಗಾಲಯದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಹೆಣ್ಣು ಹುಲಿ ತಾಯಮ್ಮ ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ಮುಂಜಾನೆ 3.45ರ ಸಮಯದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ