ಶಿವಮೊಗ್ಗ: ಬಜರಂಗದಳ ಹಿಂದೂ ಕಾರ್ಯಕರ್ತ ಹರ್ಷ ಹತ್ಯೆ(Harsha Murder) ಸಂಬಂಧ ಸಾಂತ್ವಾನ ಹೇಳಲು ಹರ್ಷ ಮನೆಗೆ ಭೇಟಿ ಕೊಟ್ಟ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್(Basangouda Patil Yatnal) ಹರ್ಷ ಕುಟುಂಬಸ್ಥರಿಗೆ ಚೆಕ್ ವಿತರಿಸಿದ್ದಾರೆ. ಸಿದ್ದಸಿರಿ ಸೌಹಾರ್ದ ಸಹಕಾರ ಸಂಸ್ಥೆಯಿಂದ 5 ಲಕ್ಷ ರೂಪಾಯಿ ಆರ್ಥಿಕ ಸಹಾಯ ಮಾಡಿದ್ದಾರೆ. ಹರ್ಷ ಮನೆಗೆ ಭೇಟಿ ನೀಡಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೆರವು ನೀಡಿದ್ದಾರೆ. ಆದ್ರೆ ಯತ್ನಾಳ್ ಚೆಕ್ ಬರೆಯುವಾಗ ಅಕ್ಷರಗಳಲ್ಲಿ 5 ಲಕ್ಷ ಎಂದು ನಮೂದಿಸಿ. ಸಂಖ್ಯೆಯಲ್ಲಿ 50 ಸಾವಿರ ಎಂದು ನಮೂದಿಸಿದ್ದಾರೆ. ಸದ್ಯ ತಪ್ಪಿನ ಬಗ್ಗೆ ಅವರ ಪಿಎ ಸದಾಶಿವ ಗಮನಕ್ಕೆ ತಂದಿದ್ದು ಹೊಸ ಚೆಕ್ ಕೊಡುವುದಾಗಿ ತಿಳಿಸಿದ್ದಾರೆ.
ಮೃತ ಹರ್ಷ ಮನೆಗೆ ಭೇಟಿ ಕೊಟ್ಟ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಕೆ.ಎಸ್. ಈಶ್ವರಪ್ಪ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಸಿದ್ದಸಿರಿ ಸೌಹಾರ್ದ ಸಹಕಾರ ಸಂಸ್ಥೆಯಿಂದ 5 ಲಕ್ಷ ರೂಪಾಯಿ ಚೆಕ್ ನೀಡಿದ್ರು. ಈ ವೇಳೆ ಯತ್ನಾಳ್ ಚೆಕ್ನಲ್ಲಿ 50,000 ಅಂತ ಅಂಕಿಯಲ್ಲಿ, ಐದು ಲಕ್ಷ ಅಂತ ಅಕ್ಷರದಲ್ಲಿ ಬರೆದಿದ್ದಾರೆ. ಚೆಕ್ ಕೊಟ್ಟ ಕುಟುಂಬಸ್ಥರಿಗೆ ಧೈರ್ಯದ ಮಾತುಗಳನ್ನಾಡಿ ಹೊರಟಿದ್ದಾರೆ. ಬಳಿಕ ಚೆಕ್ ನೋಡಿದ ಕುಟುಂಬಸ್ಥರಿಗೆ ಗೊಂದಲ ಉಂಟಾಗಿದ್ದು ಈ ಬಗ್ಗೆ ಶಾಸಕ ಯತ್ನಾಳ್ರ ಪಿಎ ಸದಾಶಿವರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಯತ್ನಾಳ್, ಕಣ್ತಪ್ಪಿನಿಂದ ಹೀಗಾಗಿ ತಪ್ಪನ್ನು ತಿದ್ದಿ 5 ಲಕ್ಷ ಚೆಕ್ ನೀಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.