ನವದೆಹಲಿ: ಭಯೋತ್ಪಾದಕನಾಗಿ ಬಾಬಾ ಸಾಹೇಬ್ ಅಂಬೇಡ್ಕರ್, ಭಗತ್ ಸಿಂಗ್ ಅವರ ಕನಸು ನನಸು ಮಾಡಿದ್ದೇನೆ. ರಾಷ್ಟ್ರ ರಾಜಧಾನಿಯಲ್ಲಿ 12,000 ಸ್ಮಾರ್ಟ್ ಶಾಲಾ ಕೊಠಡಿಗಳನ್ನು ರೂಪಿಸಿದ್ದೇನೆ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ಸಂಚಾಲಕ ಅರವಿಂದ್ ಕೇಜ್ರಿವಾಲ್, ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.
ಚುನಾವಣೆ ನಡೆಯಲಿರುವ ಪಂಜಾಬ್‌ನಲ್ಲಿ ಪ್ರತ್ಯೇಕತಾವಾದಿ ಎಂದು ವಿರೋಧ ಪಕ್ಷಗಳು ನನ್ನ ಮೇಲೆ ವಾಗ್ದಾಳಿ ನಡೆಸುತ್ತಿವೆ. ನಾನು ಈ ಶಾಲಾ ಕೊಠಡಿಗಳನ್ನು ದೇಶಕ್ಕೆ ಅರ್ಪಿಸಿದ್ದೇನೆ. ಭಯೋತ್ಪಾದಕನೊಬ್ಬ, ಬಡವರು ಮತ್ತು ಶ್ರೀಮಂತರ ಮಕ್ಕಳು ಒಟ್ಟಿಗೆ ಓದುವ ಶಾಲೆಗಳನ್ನು ನಿರ್ಮಿಸಿದ್ದಾನೆ. ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಭಗತ್ ಸಿಂಗ್ ಅವರ ಕನಸು ನನಸು ಮಾಡಿದ್ದಾನೆ ಎಂದು ಪ್ರತಿಪಕ್ಷಗಳಿಗೆ ಚಾಟಿ ಬೀಸಿದ್ದಾರೆ.