ಮುಂಬೈ: ಖ್ಯಾತ ಸಂಗೀತ ನಿರ್ದೇಶಕ 69 ವರ್ಷದ ಬಪ್ಪಿ ಲಹರಿ ಮುಂಬೈನ ಖಾಸಗಿ ಆಸ್ಪತ್ರೆಯಲಿ ಮಂಗಳವಾರ ರಾತ್ರಿ ನಿಧನರಾಗಿದ್ದಾರೆ.
ಡಿಸ್ಕೋ ಹಾಡುಗಳಿಗೆ ಪ್ರಸಿದ್ಧಿಯಾಗಿದ್ದ ಇವರು ಕನ್ನಡದಲ್ಲೂ 2 ಸಿನಿಮಾಗಳಿಗೆ ಹಾಡಿದ್ದರು. ಬಪ್ಪಿ ಲಹರಿಯವರಿಗೆ ಈ ಹಿಂದೆ ಕೋವಿಡ್-೧೯ ದೃಢಪಟ್ಟಿತ್ತು, ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿ ಚೇತರಿಸಿಕೊಂಡಿದ್ದರು.
ತಮಿಳು ತೆಲುಗು ಚಿತ್ರಲ್ಲೂ ಹಾಡಿದ್ದ ಬಪ್ಪಿ ಲಹರಿ ಅಗಾಧ ಅಭಿಮಾನಿಗಳನ್ನು, ಸಂಗೀತ ಪ್ರಿಯರನ್ನೂ ಅಗಲಿದ್ದಾರೆ.
80 ಮತ್ತು 90 ರ ದಶಕಗಳಲ್ಲಿ ಭಾರತದಲ್ಲಿ ಡಿಸ್ಕೋ ಸಂಗೀತವನ್ನು ಜನಪ್ರಿಯಗೊಳಿಸಿದ್ದ ಸಂಗೀತ-ಸಂಯೋಜಕ ಬಪ್ಪಿ ಲಾಹಿರಿ ಅವರು ಆರೋಗ್ಯ ಸಮಸ್ಯೆಗಳಿಂದ ಸಾವನ್ನಪ್ಪಿದ್ದಾರೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಬುಧವಾರ ತಿಳಿಸಿದ್ದಾರೆ.
ಲಾಹಿರಿ ಒಂದು ತಿಂಗಳ ಕಾಲ ಆಸ್ಪತ್ರೆಗೆ ದಾಖಲಾಗಿದ್ದರು ಮತ್ತು ಸೋಮವಾರ ಡಿಸ್ಚರ‍್ಜ್ ಆಗಿದ್ದರು. ಆದರೆ ಮಂಗಳವಾರ ಅವರ ಆರೋಗ್ಯ ಹದಗೆಟ್ಟಿದ್ದು, ಅವರನ್ನು ಆಸ್ಪತ್ರೆಗೆ ಕರೆತರಲಾಯಿತು.