Breaking News

ಉತ್ತರ ಪ್ರದೇಶ ಚುನಾವಣೆಗೆ ಬಿಜೆಪಿ ಪ್ರಣಾಳಿಕೆ ರಿಲೀಸ್​​.. ಲವ್ ಜಿಹಾದ್‌ಗೆ ಶಿಕ್ಷೆ; ಮತ್ತೇನಿದೆ?

Spread the love

ಉತ್ತರದ ನಾಡಿನ ಚುನಾವಣೆಗೆ ಇನ್ನೊಂದು ದಿನ ಬಾಕಿ ಇದೆ. ಚುನಾವಣೆಗೂ 48 ಗಂಟೆಯ ಮುಂಚೆಯೇ ಕಮಲ ಪಡೆ ತನ್ನ ಪ್ರಣಾಳಿಕೆಯನ್ನ ರಿಲೀಸ್​ ಮಾಡಿದೆ. ನಾಡಿನ ರೈತರು ಹಾಗೂ ವಿದ್ಯಾರ್ಥಿಗಳಿಗೆ ಭರಪೂರದ ಭರವಸೆಗಳನ್ನೇ ಉಣಬಡಿಸಿದೆ. ಮುಖ್ಯವಾಗಿ ಲವ್‌ ಜಿಹಾದ್‌ಗೆ ಕಾಯ್ದೆ ಜಾರಿ ತರುವ ಭರವಸೆ ಪ್ರಸ್ತಾಪವಾಗಿದೆ.

ಲವ್ ಜಿಹಾದ್‌ಗೆ ಶಿಕ್ಷೆ, ಮತದಾರರಿಗೆ ಭರಪೂರ ಭರವಸೆ
ಒಂದು ದಿನ.. ಉತ್ತರದ ಚುನಾವಣಾ ಕದನಕ್ಕೆ ಇನ್ನೊಂದೇ ದಿನ ಬಾಕಿ. ಭಾರೀ ಜಿದ್ದಾಜಿದ್ದಿನ ಪ್ರಚಾರದ ನಡುವೆಯೇ ಕೊನೆಗೂ ಎಲೆಕ್ಷನ್​ ದಿನಾಂಕ ಸಮೀಪಿಸಿ ಬಿಟ್ಟಿದೆ. ಬರುವ ಬುಧವಾರ ಉತ್ತರ ಪ್ರದೇಶದಲ್ಲಿ ಮತಯುದ್ಧ ಆರಂಭವಾಗಲಿದೆ. ಕೊನೆಯ ದಿನದವರೆಗೂ ಉತ್ತರದ ಮತದಾರರನ್ನ ಸೆಳೆಯೋಕೆ ರಾಜಕೀಯ ಪಕ್ಷಗಳು ಭಾರೀ ತಂತ್ರವನ್ನೇ ಹಣೆಯುತ್ತಿದ್ದಾರೆ. ಚುನುವಾಣಾ ಕದನಕ್ಕೆ ಇನ್ನೂ 48 ಗಂಟೆಗಳು ಬಾಕಿ ಇರುವಂತೆ ಇವತ್ತು ಕಮಲ ಪಡೆ ತನ್ನ ಪ್ರಣಾಳಿಕೆಯನ್ನ ರಿಲೀಸ್​ ಮಾಡಿದೆ. ಮತದಾರರಿಗೆ ಭರವಸೆಗಳ ಭರಾಪೂರವನ್ನೇ ನೀಡಿದೆ.

ಉತ್ತರ ಪ್ರದೇಶದಲ್ಲಿ ಇವತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಸಿಎಂ ಯೋಗಿ ಆದಿತ್ಯನಾಥ್​ ತಮ್ಮ ಪಕ್ಷದ ಪ್ರಣಾಳಿಕೆಯನ್ನ ಬಿಡುಗಡೆಗೊಳಿಸಿದ್ರು. ಲವ್ ಜಿಹಾದ್ ಪ್ರರಣದಲ್ಲಿ ಶಿಕ್ಷೆ, ನೀರಾವರಿಗೆ ಉಚಿತ ವಿದ್ಯುತ್, ಕನಿಷ್ಠ ಬೆಂಬಲ ಬೆಲೆ, ಕಾಲೇಜು ವಿದ್ಯಾರ್ಥಿನಿಯರಿಗೆ ಉಚಿತ ಸ್ಕೂಟಿ, ಹೀಗೆ ಭರವಸೆಗಳ ಭರಪೂರವನ್ನೇ ಉಣಬಡಿಸಿದ್ರು.

ಕಮಲ ಕೋಟೆಯ ಪ್ರಣಾಳಿಕೆ.. ಏನೇನಿದೆ..?
ಈ ಬಾರಿಯ ಕಮಲ ಪಡೆಯ ಪ್ರಣಾಳಿಕೆಯಲ್ಲಿ ಲವ್ ಜಿಹಾದ್ ಪ್ರಕರಣಗಳಲ್ಲಿ 1 ಲಕ್ಷ ರೂಪಾಯಿ ದಂಡದೊಂದಿಗೆ ಕನಿಷ್ಠ 10 ವರ್ಷಗಳ ಕಾಲ ಜೈಲು ಶಿಕ್ಷೆ ಖಚಿತಪಡಿಸೋದಾಗಿ ತಿಳಿಸಲಾಗಿದೆ. ಅಲ್ಲದೆ ನೀರಾವರಿಗಾಗಿ ರೈತರಿಗೆ ಉಚಿತ ವಿದ್ಯುತ್ ನೀಡುವ ಭರವಸೆ ನೀಡಲಾಗಿದೆ. ಕನಿಷ್ಠ ಬೆಂಬಲ ಬೆಲೆಯಲ್ಲಿ ಗೋಧಿ ಮತ್ತು ಭತ್ತದ ಖರೀದಿಯನ್ನು ಬಲಪಡಿಸೋದಾಗಿ ಹೇಳಲಾಗಿದೆ. ಕಾಲೇಜು ವಿದ್ಯಾರ್ಥಿನಿಯರಿಗೆ ಉಚಿತ ಸ್ಕೂಟಿ ಸೇರಿದಂತೆ 60 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಉಚಿತ ಸಾರಿಗೆ ವ್ಯವಸ್ಥೆಯನ್ನೂ ನೀಡಲಾಗಿದೆ. ಪ್ರಧಾನಮಂತ್ರಿಯವರ ಉಜ್ವಲ ಯೋಜನೆಯಡಿ ದೀಪಾವಳಿ ಮತ್ತು ಹೋಳಿ ವೇಳೆ 2 ಉಚಿತ ಎಲ್‌ಪಿಜಿ ಸಿಲಿಂಡರ್‌ ಒದಗಿಸಲಾಗುತ್ತೆ. ಇದಲ್ಲದೆ ಪ್ರತಿ ಕುಟುಂಬದ ಕನಿಷ್ಠ ಒಬ್ಬ ಸದಸ್ಯರಿಗೆ ಸ್ವಯಂ ಉದ್ಯೋಗಾವಕಾಶಗಳ ಭರವಸೆ ನೀಡಲಾಗಿದೆ.


Spread the love

About Laxminews 24x7

Check Also

ರಾಜ್ಯದ ಹಲವೆಡೆ ಭಾರಿ ಮಳೆ ಮುನ್ಸೂಚನೆ

Spread the loveಬೆಂಗಳೂರು: ರಾಜ್ಯದ ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ