Breaking News

ಮಗುವಿನ ಅನಾರೋಗ್ಯ ಮುಂದಿಟ್ಟುಕೊಂಡು ಮತಾಂತರಕ್ಕೆ ಯತ್ನ: ಓರ್ವನ ಬಂಧನ

Spread the love

ಶಿವಮೊಗ್ಗ: ಅನಾರೋಗ್ಯದಿಂದ ಬಳಲುತ್ತಿರುವ ನಿಮ್ಮ ಮಗು ಆರೋಗ್ಯವಂತವಾಗಬೇಕಾದರೆ, ಹಿಂದೂ ಧರ್ಮ ಬಿಟ್ಟು ಕ್ರಿಶ್ಚಿಯನ್ ಧರ್ಮ ಅನುಸರಿಸಬೇಕು ಎಂದು ಹೇಳಿ ಮತಾಂತರ ಮಾಡಲು ಮುಂದಾಗಿದ್ದ ವ್ಯಕ್ತಿಯೊಬ್ಬನನ್ನು ಶಿವಮೊಗ್ಗದ ವಿನೋಬನಗರ ಪೊಲೀಸರು ಬಂಧಿಸಿದ್ದಾರೆ‌.

ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬೊಮ್ಮನಕಟ್ಟೆ ಬಡಾವಣೆಯ ನಿವಾಸಿಯೊಬ್ಬರ 3 ವರ್ಷದ ಮಗುವಿಗೆ ಅನಾರೋಗ್ಯ ಉಂಟಾಗಿದ್ದು, ಸಾಕಷ್ಟು ವೈದ್ಯರ ಬಳಿ ತೋರಿಸಿದರೂ ಮಗು ಗುಣಮುಖವಾಗಿರಲಿಲ್ಲ. ಇದನ್ನೆ ಬಂಡವಾಳವಾಗಿ ಬಳಸಿಕೊಂಡ ಶಿವಮೊಗ್ಗದ ಕಾಶಿಪುರ ಬಡಾವಣೆಯ ನಿವಾಸಿ ಮಧು (34) ಎಂಬ ವ್ಯಕ್ತಿಯು ನಿಮ್ಮ ಮಗು ಗುಣಮುಖವಾಗಬೇಕಾದರೆ, ನೀವು ನಿಮ್ಮ ಹಿಂದೂ ಧರ್ಮವನ್ನು ಬಿಟ್ಟು ಕ್ರಿಶ್ಚಿಯನ್ ಧರ್ಮಕ್ಕೆ ಬರಬೇಕು ಎಂದು ಒತ್ತಾಯ ಮಾಡಿದ್ದಾನೆ.

ಅಲ್ಲದೇ ಏಸುವನ್ನು ಪ್ರಾರ್ಥಿಸಬೇಕು ಹಾಗೂ ಹಿಂದೂ ದೇವತೆಯ ಫೋಟೋಗಳನ್ನು ತೆಗೆದು ಹಾಕಬೇಕು ಎಂದು ಹೇಳಿ, ಕ್ರಿಶ್ಚಿಯನ್ ಧರ್ಮ ಭೋದನೆಯ ಪುಸ್ತಕಗಳನ್ನು ನೀಡಿ ಧರ್ಮ ಪಾಲಿಸುವಂತೆ ಒತ್ತಾಯಿಸುತ್ತಿದ್ದ ಎನ್ನಲಾಗ್ತಿದೆ.


Spread the love

About Laxminews 24x7

Check Also

ಗೋಲಿಹಳ್ಳಿಯ ಶ್ರೀ ಶಿವ ಮಂದಿರದಲ್ಲಿ ನೂತನ ಶಿವ ಮುಖವಾಡ ಮತ್ತು ನಂದಿ ಮೂರ್ತಿ ಪ್ರತಿಷ್ಠಾಪನೆ

Spread the love ಗೋಲಿಹಳ್ಳಿಯ ಶ್ರೀ ಶಿವ ಮಂದಿರದಲ್ಲಿ ನೂತನ ಶಿವ ಮುಖವಾಡ ಮತ್ತು ನಂದಿ ಮೂರ್ತಿ ಪ್ರತಿಷ್ಠಾಪನೆ ಖಾನಾಪೂರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ