ಲಖನೌ: ಪಂಚರಾಜ್ಯಗಳ ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜಕೀಯದಲ್ಲಿ ಬಿರುಸಿನ ಚಟುವಟಿಕೆ ಶುರುವಾಗಿದೆ. ಅದರಲ್ಲಿಯೂ ಸದ್ಯ ಎಲ್ಲರ ಗಮನ ಸೆಳೆದಿರುವುದು ಉತ್ತರ ಪ್ರದೇಶ. ಇಲ್ಲಿಯ ರಾಜಕೀಯ ವಲಯದಲ್ಲಿ ಇದೀಗ ಭಾರಿ ಕುತೂಹಲದ ಬೆಳವಣಿಗೆ ನಡೆದಿದ್ದು, ತ್ರಿವಳಿ ತಲಾಖ್ ಸಂತ್ರಸ್ತೆ ನಿದಾ ಖಾನ್ ಬಿಜೆಪಿ ಸೇರಿದ್ದಾರೆ.
ಇತ್ತಿಹಾದ್-ಎ-ಮಿತಾತ್ ಮಂಡಳಿಯ ಮುಖ್ಯಸ್ಥ ಮೌಲಾನಾ ತೌಖೀರ್ ರಾಜಾ ಖಾನ್ ಅವರ ಸೊಸೆಯಾಗಿರುವ ನಿದಾ ಬಿಜೆಪಿಯನ್ನು ಸೇರುವ ಮೂಲಕ ಕಾಂಗ್ರೆಸ್‌ಗೂ ಶಾಕ್ ಕೊಟ್ಟಿದ್ದಾರೆ.
ಸಮಾಜ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ರ ಸೊಸೆ ಅಪರ್ಣಾ ಯಾದವ್ ಇತ್ತೀಚೆಗಷ್ಟೇ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಇದಾದ ಕೆಲವೇ ದಿನಗಳಲ್ಲಿ ನಿದಾ ಖಾನ್ ಸಹ ಬಿಜೆಪಿಗೆ ಸೇರಿರುವುದು ಬಹಳ ಕುತೂಹಲ ಮೂಡಿಸಿದೆ.