Breaking News

BIG NEWS : ಉತ್ತರ ಕೊರಿಯಾ ಸರ್ವಾಧಿಕಾರಿ ‘ಕಿರಿಕ್’ ಕಿಮ್ ನಿಗೂಢ ಕಣ್ಮರೆ..!?

Spread the love

ಸಿಯೋಲ್, ಏ.22-ವಿಶ್ವಸಂಸ್ಥೆಯ ಎಚ್ಚರಿಕೆಯನ್ನೂ ಲೆಕ್ಕಿಸದೆ ಸತತ ಅಣ್ವಸ್ತ್ರಗಳ ಪರೀಕ್ಷೆಗಳನ್ನು ನಡೆಸುತ್ತಾ ಏಷ್ಯಾ ಖಂಡವಲ್ಲದೆ ಜಗತ್ತಿನ ಮಹಾ ಶಕ್ತಿಶಾಲಿ ದೇಶ ಅಮೆರಿಕಾ ನಿದ್ದೆಗೆಡಿಸಿದ್ದ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮರಣಶಯ್ಯೆಯಲ್ಲಿದ್ದಾರೆಂಬ ವರದಿಗಳ ನಡುವೆಯೇ ಅವರು ಕಣ್ಮರೆಯಾಗಿದ್ದಾರೆ ಎಂಬ ಸಂಗತಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಒಂದು ಮೂಲದ ಪ್ರಕಾರ, ಹುಚ್ಚು ದೊರೆಯ ಮೆದುಳು ನಿಷ್ಕ್ರಿಯ (ಬ್ರೈನ್ ಡೆಡ್) ಆಗಿದೆ ಎಂದು ಹೇಳುತ್ತಿದ್ದರೆ, ಮತ್ತೊಂದು ಮೂಲ ಕಳೆದ ಒಂದು ವಾರದಿಂದ ಅವರು ನಾಪತ್ತೆಯಾಗಿದ್ದಾರೆ ಎಂದು ಹೇಳಿದೆ. ಒಟ್ಟಾರೆ ಕೊರಿಯಾ ಸರ್ವಾಧಿಕಾರಿ ಕಿಮ್ ಬಗ್ಗೆ ಕೆಲವು ಊಹಾಪೋಹಗಳು ಎದ್ದಿದ್ದು, ಅವರು ಏನಾಗಿದ್ದಾರೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಲಭಿಸಿಲ್

ಈ ಮಧ್ಯೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಿಮ್ ಆದಷ್ಟು ಶೀಘ್ರ ಗುಣಮುಖರಾಗಲಿ ಎಂದು ಕೋರಿದ್ದರಾದರೂ ಅವರ ಶೋಚನೀಯ ಸ್ಥಿತಿ ಬಗ್ಗೆ ಮರುಕ ವ್ಯಕ್ತಪಡಿಸಿದ್ದಾರೆ.ಯಾವುದೋ ಅನಾರೋಗ್ಯದ ಕಾರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮಿಸೈಲ್ ಮ್ಯಾನ್ ಎಂಬ ಕುಖ್ಯಾತಿಯ ಕಿಮ್ ಸ್ಥಿತಿ ಚಿಂತಾಜನಕವಾಗಿದೆ ಎಂದು ನಿನ್ನೆ ವರದಿಯಾಗಿತ್ತು.

ಆದರೆ, ಎಲ್ಲ ವಿಷಯಗಳನ್ನು ಅತ್ಯಂತ ಗೌಪ್ಯವಾಗಿರುವ ಉತ್ತರ ಕೊರಿಯಾದಿಂದ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಸ್ಥೂಲಕಾಯ ಸರ್ವಾಧಿಕಾರಿ ಯಾವ ಕಾರಣಕ್ಕಾಗಿ ಸರ್ಜರಿಗೆ ಒಳಗಾದರು. ಈಗ ಅವರ ಆರೋಗ್ಯ ಸ್ಥಿತಿ ಹೇಗಿದೆ ಎಂಬ ಬಗ್ಗೆ ಉತ್ತರ ಕೊರಿಯಾ ಗುಟ್ಟು ಬಿಟ್ಟು ಕೊಟ್ಟಿಲ್ಲ.

ಆದರೆ, ಉತ್ತರ ಕೊರಿಯಾದ ಕಡು ವೈರಿ ದೇಶ ದಕ್ಷಿಣ ಕೊರಿಯಾದಲ್ಲಿ ಈ ಬಗ್ಗೆ ಹರಿದಾಡುತ್ತಿವೆ. ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಕಾರಣ ಅವರು ರಾಜಧಾನಿ ಪಯೋಂಗ್‍ಯಾಂಗ್‍ನಲ್ಲಿ ಶಸ್ತ್ರಕ್ರಿಯೆಗೆ ಒಳಗಾದರು. ನಂತರ ಅವರ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂಬ ವರದಿಗಳನ್ನು ದೃಢಪಡಿಸಿಕೊಳ್ಳಲು ದಕ್ಷಿಣ ಕೊರಿಯಾ ಕಾರ್ಯೋನ್ಮುಖವಾಗಿದೆ.

ಕಳೆದ ವಾರವಷ್ಟೇ ಉತ್ತರ ಕೊರಿಯಾ ಮತ್ತೊಂದು ಕ್ಷಿಪಣಿ ಪರೀಕ್ಷೆ ನಡೆಸಿತ್ತು. ಅಮರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ಗೆ ತಿರುಗೇಟು ನೀಡಿದ್ದ ಕಿಮ್ ವಿಶ್ವ ಸಂಸ್ಥೆ ಭದ್ರತಾ ಮಂಡಳಿಗೇ ಸಡ್ಡು ಹೊಡೆದು ನಿರಂತರ ಅಣ್ವಸ್ತ್ರ ಪರೀಕ್ಷೆ ನಡೆಸಿದ್ದರು. ಅಮೆರಿಕ ಮತ್ತು ಉತ್ತರ ಕೊರಿಯಾ ನಡುವಣ ಸಂಧಾನ ಮಾತುಕತೆ ಮುರಿದು ಬಿದ್ದಿದೆ.

ಉತ್ತರ ಕೊರಿಯಾಗೆ ಕೊರೊನಾ ಕಾಲಿಟ್ಟಿಲ್ಲ ಏಕೆ? ಸರ್ವಾಧಿಕಾರಿ ಕಿಮ್ ಬಗ್ಗೆ ಗೊಂದಲದ ನಡುವೆಯೇ ಚೀನಾದ ಪಕ್ಕದಲ್ಲೇ ಇರುವ ಉತ್ತರ ಕೊರಿಯಾಗೆ ಕಿಲ್ಲರ್ ಕೊರೊನಾ ಏಕೆ ಕಾಲಿಟ್ಟಿಲ್ಲ, ಅಲ್ಲಿ ಒಂದೇ ಒಂದು ಸೋಂಕು ಪ್ರಕರಣ ಪತ್ತೆಯಾಗಿಲ್ಲ. ಏನಿದರ ರಹಸ್ಯ ಎಂಬ ಪ್ರಶ್ನೆಯೂ ಬೃಹದಾಕಾರ ಸ್ವರೂಪ ಪಡೆದಿದೆ.


Spread the love

About Laxminews 24x7

Check Also

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಮೊದಲ ಬಾರಿಗೆ ಫ್ಯಾಷನ್‌ ಶೋ”

Spread the love    ಬೆಂಗಳೂರು: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸೀಸನ್ಸ್‌ ಆಫ್‌ ಸ್ಮೈಲ್‌ನ ಭಾಗವಾಗಿ ಇದೇ ಮೊದಲ ಬಾರಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ