Breaking News

ಒಂದ ಲಕ್ಷ ಕೊಟ್ಟರ ಐದು ಲಕ್ಷ ಕೊಡ್ತಿದ್ದ ಡಕಾಯಿತರು ಅಂದರ್

Spread the love

ಬೆಂಗಳೂರು: ಹಣ ಡಬಲ್ ಮಾಡಿಕೊಡುವುದಾಗಿ ವಂಚಿಸುತ್ತಿದ್ದ ಗುಂಪನ್ನು ಬೆಂಗಳೂರಿನ ಅಮೃತಹಳ್ಳಿ ಪೊಲೀಸರು(Karnataka Police) ಬಂಧಿಸಿದ್ದಾರೆ.

ನಟರಾಜ್, ಬಾಲಾಜಿ, ವೆಂಕಟೇಶ, ರಾಕೇಶ್ ಬಂಧಿತ ಆರೋಪಿಗಳು. ನಕಲಿ ನೋಟಿನ ಕಂತೆ ಮೊಬೈಲ್‌ನಲ್ಲಿ(Mobile) ವಿಡಿಯೋ ಮಾಡಿ ಹೂಡಿಕೆದಾರರಿಗೆ ತೋರಿಸಿ ಆಫರ್ ನೀಡುತ್ತಿದ್ದ ಆರೋಪಿಗಳು, ಕೆಲವೇ ದಿನಗಳಲ್ಲಿ ಹಣ(Money) ಡಬಲ್ ಮಾಡಿಕೊಡುವುದಾಗಿ ಹೇಳುತ್ತಿದ್ದರು. ಇದನ್ನು ನಂಬಿ ಹೂಡಿಕೆದಾರರು ಹಣ ಕೊಡಲು ಹೋದಾಗ ಕಸಿದು ಪರಾರಿಯಾಗುತ್ತಿದ್ದರು. ಸದ್ಯ ಆರೋಪಿಗಳಿಂದ 20 ಕೋಟಿ ಮೊತ್ತದ ನಕಲಿ ನೋಟು, 2 ಕಾರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಕಿಡ್ನಾಪ್ ಕೇಸ್ ದಾಖಲಾಗಿತ್ತು. ಸೈಟ್ ತೋರಿಸ್ತೀನಿ ಅಂತ ಕಿಡ್ನಾಪ್ ಮಾಡಿ ಹೆದರಿಸಿ 10 ಲಕ್ಷ ತಗೊಂಡು ಹೋಗಿದ್ದರು. ನಟರಾಜ್ ಎಂಬಾತ ಗುಂಪು ಕಟ್ಟಿಕೊಂಡು ಕೃತ್ಯ ಮಾಡಿದ್ದ. ಆರೋಪಿಗಳು ಸಿಕ್ಕ ಬಳಿಕ ನಕಲಿ ನೋಟು ಜಾಲ ಪತ್ತೆ ಆಗಿದೆ. ಬ್ಯಾಗ್ ಮೇಲ್ಬಾದಲ್ಲಿ ಒರಿಜಿನಲ್ ನೋಟು ಇಡುತ್ತಿದ್ದರು. ಕೆಳಗಡೆ ನಕಲಿ ನೋಟು ಇಟ್ಟು ಕೋಟ್ಯಾಂತರ ರೂಪಾಯಿ ಹಣ ಇದೆ ಅಂತ ನಂಬಿಸುತ್ತಿದ್ದರು. ಒಂದು ಲಕ್ಷ ಕೊಟ್ಟರೇ ಒಂದು ವಾರದಲ್ಲಿ ಎರಡು ಲಕ್ಷ ಕೊಡ್ತೀವಿ ಅಂತ ಹಣ ಪಡೀತಾ ಇದ್ರು. ಸಾಕಷ್ಟು ಬಿಸಿನೆಸ್ ಇದೆ ಹಣ ಹೂಡಿಕೆ ಮಾಡಿ ಅಂತ ಹಣ ಪಡೀತಾ ಇದ್ರು ಎಂದು ಡಿಸಿಪಿ ಅನೂಪ್ ಶೆಟ್ಟಿ ಹೇಳಿಕೆ ನೀಡಿದ್ದಾರೆ.

ಇದರ ಜೊತೆಗೆ ಒಂದು ಲಕ್ಷ ಹಣ ಕೊಟ್ಟರೇ 3ರಿಂದ 5 ಲಕ್ಷ ನಕಲಿ ನೋಟು ಸಹ ನೀಡುತ್ತಿದ್ದರು. ಮೂವಿ ಶೂಟಿಂಗ್​ಗೆ ಬಳಸೋ ನೋಟುಗಳು ಸಿಕ್ಕಿದೆ. ತನಿಖೆ ಮುಂದುವರೆದಿದೆ. ಕೆಲವರಿಗೆ ಕೋಟಾ ನೋಟು ಕೊಡೊದಾಗಿ ಸಹ ಹೇಳಿ ವಂಚನೆ ಮಾಡಿರುವ ಅನುಮಾನ ಇದೆ. ಈ ಬಗ್ಗೆ ಸಹ ತನಿಖೆ ನಡೆಯುತ್ತಿದೆ ಎಂದು ಡಿಸಿಪಿ ಅನೂಪ್ ಶೆಟ್ಟಿ ತಿಳಿಸಿದ್ದಾರೆ.


Spread the love

About Laxminews 24x7

Check Also

ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ನಡೆದ ಅವ್ಯವಹಾರ ಹಾಗೂ ಭ್ರಷ್ಟಾಚಾರದ ಸಂಪೂರ್ಣ ‌ತನಿಖೆಯನ್ನು ನಡೆಸಬೇಕೆಂದು ಆಗ್ರಹಿಸಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘಗಳ ಮಹಾಸಂಘ ಪ್ರತಿಭಟನೆ

Spread the loveಬೆಳಗಾವಿ ;ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ನಡೆದ ಅವ್ಯವಹಾರ ಹಾಗೂ ಭ್ರಷ್ಟಾಚಾರದ ಸಂಪೂರ್ಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ