ರಮೇಶ್ ಜಾರಕಿಹೊಳಿಯವರು ಒಬ್ಬ ಪವರ್ ಫುಲ್ ನಾಯಕರು ಎಷ್ಟು ಶಾಸಕರನ್ನು ಬೇಕಾದರೂ ಬಿಜೆಪಿಗೆ ಕರೆತರಬಹುದು- ಗೋವಿಂದ್ ಕಾರಜೋಳ್
Laxminews 24x7
ಜನವರಿ 26, 2022
new delhi, Uncategorized, ಅಂತರಾಷ್ಟ್ರೀಯ, ಗೋಕಾಕ, ಜಿಲ್ಲೆ, ಬೆಳಗಾವಿ, ರಾಜಕೀಯ, ರಾಜ್ಯ, ರಾಷ್ಟ್ರೀಯ
250 Views
- ರಮೇಶ್ ಜಾರಕಿಹೊಳಿ ಒಬ್ಬ ಸಮರ್ಥ ನಾಯಕರು. ಅವರು ಬಿಜೆಪಿಗೆ ಎಷ್ಟು ಜನರನ್ನು ಬೇಕಾದರೂ ಕರೆ ತರಬಹುದು. ಅವರಲ್ಲಿ ಆ ಶಕ್ತಿ ಇದೆ. ಅವರು ಎಷ್ಟು ಜನ ಶಾಸಕರನ್ನು ಬೇಕಾದರೂ ಕರೆತರಬಹುದು ಎಂದು ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.ಬೆಳಗಾವಿಯಲ್ಲಿ ಗಣರಾಜ್ಯೋತ್ಸವ ಸಂಬರ್ಭದಲ್ಲಿ ಧ್ವಜಾರೋಹಣದ ನೆರವೇರಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳರವರು, ರಮೇಶ್ ಜಾರಕಿಹೊಳಿ ಒಬ್ಬ ಹಿರಿಯ ರಾಜಕಾರಣಿಗಳು. ಮಾಜಿ ಮಂತ್ರಿ ಹಾಗೂ ಅನುಭವಿ ರಾಜಕಾರಣಿ. ಅವರ ಸಂಪರ್ಕದಲ್ಲಿ ಎಷ್ಟೋ ಜನ ಶಾಸಕರು ಇರಬಹುದು. ಆದರೆ ಆವಿಷಯದ ಬಗ್ಗೆ ನನಗೆ ಗೊತ್ತಿಲ್ಲ.ಆದರೆ ಅವರಲ್ಲಿ ಆ ತಾಕತ್ತಿದೆ. ಆಶಕ್ತಿ ಇದೆ. ಅವರು ಶಾಸಕರನ್ನು ಬಿಜೆಪಿ ಕರೆದುಕೊಂಡು ಬರಬಹುದು. ರಮೇಶ್ ಜಾರಕಿಹೊಳಿ ರಾಜಕೀಯದಲ್ಲಿ ಶಕ್ತಿ ಇರುವ ನಾಯಕರು. ಅವರ ಜೊತೆ ಸಂಪರ್ಕದಲ್ಲಿರುವುವವರು ಬಿಜೆಗೆ ಬರಬಹುದು ಎಂದು ಆಹ್ವಾನ ನೀಡಿದರು. ಆದರೆ ಈ ಕುರಿತಂತೆ ಎಷ್ಟು ಜನ ಶಾಸಕರು ಅವರ ಸಂಪರ್ಕದಲ್ಲಿದ್ದಾರೆಂದು ನನಗೆ ಗೊತ್ತಿಲ್ಲ. ಆದರೆ ಬಿಜೆಪಿ ಎಲ್ಲರ ಶಕ್ತಿಯನ್ನು ಬಳಸಿಕೊಳ್ಳಲು ಸಮರ್ಥವಿದೆ ಎಂದರು.
ಬೈಟ್:
ವಿ/ವೊ: ಇನ್ನು ಅಚಿವ ಸಂಪುಟ ಪುನಾರಚನೆ ಕುರಿತಂತೆ ಶಾಸಕ ಅಭಯ್ ಪಾಟೀಲ್ ಹೇಳಿಕೆ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ಈ ಕುರಿತಂತೆ ಮುಖ್ಯಮಂತ್ರಿಗಳು ಈ ಕುರಿತಂತೆ ಹೇಳಿದ್ದಾರೆ. ಸಚಿವ ಸಂಪುಟ ವಿಚಾರ ಅದು ಮುಖ್ಯಮಂತ್ರಿಗಳ ಪರಮಾಧಿಕಾರ ಎಂದರು.
ಬೈಟ್: