ನಂಜನಗೂಡು : ರಸ್ತೆ ತುಂಬೆಲ್ಲಾ ಹರಡಿದ್ದ ಹುರಳಿ ಸೊಪ್ಪುನಿಂದಾಗಿ ಗರ್ಭಿಣಿಯನ್ನು ಹೊತ್ತ ಅಂಬ್ಯುಲೆನ್ಸ್ ವಾಹನವೊಂದು ಸಿಲುಕಿಕೊಂಡು ಹುರುಳಿ ಸೊಪ್ಪಿನಿಂದ ಬಿಡಿಸಿಕೊಂಡು ಮುಂದೆ ಸಾಗಲು ಚಾಲಕ ಹರಸಾಹಸ ಪಡಬೇಕಾಯಿತು.
ಸಾರ್ವಜನಿಕ ರಸ್ತೆಯಲ್ಲಿ ಹುರಳಿ ಒಕ್ಕಣೆ ಮಾಡುವುದಕ್ಕೆ ಸರಕಾರ ಈ ಹಿಂದೆ ನಿರ್ಬಂಧ ಹೇರಿದ್ದರೂ ಅದು ಕೇವಲ ಪುಸ್ತಕದ ಬದನೆಕಾಯಿಯಂತಾಗಿದೆ.
ಸಾರ್ವಜನಿಕ ರಸ್ತೆಯಲ್ಲಿ ಹುರಳಿ ಒಕ್ಕಣೆ ಮಾಡುವುದಕ್ಕೆ ಸರಕಾರ ಈ ಹಿಂದೆ ನಿರ್ಬಂಧ ಹೇರಿದ್ದರೂ ಅದು ಕೇವಲ ಪುಸ್ತಕದ ಬದನೆಕಾಯಿಯಂತಾಗಿದೆ. ಬುಧವಾರ ಗರ್ಭಿಣಿಯೊಬ್ಬಳನ್ನ ಹೊತ್ತುಸಾಗುತ್ತಿದ್ದ ಆಂಬ್ಯುಲೆನ್ಸ್ ಗೆ ಒಕ್ಕಣೆ ಮಾಡುತ್ತಿದ್ದ ಸೊಪ್ಪು ಸಿಲುಕಿಕೊಂಡ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕೂಡ್ಲಾಪುರ ಬಳಿ ಈ ಘಟನೆ ನಡೆದಿದೆ.
ತಾಲೂಕಿನ ತರದಲೆ ಗ್ರಾಮದ ಗರ್ಭಿಣಿಯನ್ನ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು.ರಸ್ತೆಯಲ್ಲಿ ರೈತರು ಹುರಳಿ ಒಕ್ಕಣೆ ಮಾಡುತ್ತಿದ್ದಾಗ ಸೊಪ್ಪು ಆಂಬುಲೆನ್ಸ್ ಕೆಳಭಾಗಕ್ಕೆ ಸುತ್ತಿಕೊಂಡು ಮುಂದಕ್ಕೆ ಸಾಗಲಾರದೆ ನಿಲ್ಲುವಂತಾಯಿತು. ಬಳಿಕ ಸ್ಥಳೀಯರ ನೆರವಿನೊಂದಿಗೆ ಹುರಳಿ ಸೊಪ್ಪನ್ನು ಬಿಡಿಸಿ ನಂತರ ಮುಂದೆ ಸಾಗಲು ಕೆಲವು ಸಮಯ ವ್ಯರ್ಥವಾಗಿದೆ.
Laxmi News 24×7