ಮುಂಬೈ: ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಇನ್ಮುಂದೆ ರೈಲಿನಲ್ಲಿ ಲಗೇಜ್ ಕಳೆದು ಹೋದ್ರೆ ಪ್ರಯಾಣಿಕರು ಚಿಂತಿಸಬೇಕಿಲ್ಲ. ಯಾಕಂದ್ರೆ, ಭಾರತೀಯ ರೈಲ್ವೆ ನೂತನ ಸೇವೆಯೊಂದನ್ನ ಪರಿಚಯಿಸಿದ್ದು, ಈ ಮೂಲಕ ಕಳೆದು ಹೋದ ಲಗೇಜ್ ಸುಲಭವಾಗಿ ಪತ್ತೆ ಮಾಡಬಹುದು.
ಈ ಕುರಿತು ಪಶ್ಚಿಮ ರೈಲ್ವೆ ಮಾಹಿತಿ ನೀಡಿದ್ದು, ಪ್ರಯಾಣಿಕರು ತಮ್ಮ ಕಳೆದುಹೋದ ಸಾಮಾನುಗಳನ್ನ ಮರಳಿ ಪಡೆಯಲು ಸುಲಭವಾಗುವಂತೆ ಆರ್‌ಪಿಎಫ್ / ಡಬ್ಲ್ಯುಆರ್ ‘ಮಿಷನ್ ಅಮಾನತ್’ ಎಂಬ ವಿನೂತನ ಉಪಕ್ರಮವನ್ನ ಕೈಗೊಂಡಿದೆ. ಅದ್ರಂತೆ, ಪ್ರಯಾಣಿಕರು ಕಳೆದುಹೋದ ಲಗೇಜ್ʼಗಳ ವಿವರಗಳನ್ನ ಲಿಂಕ್ https://wr.indianrailways.gov.in ಅಡಿಯಲ್ಲಿ ಪೋಸ್ಟ್ ಮಾಡಿದ ಚಿತ್ರಗಳೊಂದಿಗೆ ಪರಿಶೀಲಿಸಬಹುದು’ ಎಂದಿದೆ.
ಹೌದು, ಆರ್‌ಪಿಎಫ್ ಪಡೆಯೊಂದಿಗೆ ‘ಮಿಷನ್ ಅಮಾನತ್’ ಸೇವೆಯನ್ನ ಜಾರಿಗೆ ತಂದಿದ್ದು, ಈ ಹೊಸ ಉಪಕ್ರಮದ ಅಡಿಯಲ್ಲಿ ಪ್ರಯಾಣಿಕರು ತಮ್ಮ ಕಳೆದುಹೋದ ಲಗೇಜ್ ಸುಲಭವಾಗಿ ಮರಳಿ ಪಡೆಯಬಹುದು. ಇನ್ಮುಂದೆ ರೈಲ್ವೇ ಪ್ರೊಟೆಕ್ಷನ್ ಫೋರ್ಸ್ (RPF) ಪ್ರಯಾಣಿಕರ ಸುರಕ್ಷತೆ ಮತ್ತು ಭದ್ರತೆ ಹಾಗೂ ಅವ್ರ ಲಗೇಜ್ ಮೇಲೆ ನಿಗಾ ವಹಿಸಲಿದೆ.
ಅದ್ರಂತೆ, ಕಳೆದು ಹೋದ ಸರಂಜಾಮುಗಳ ವಿವರಗಳನ್ನ ಛಾಯಾಚಿತ್ರ ಸಮೇತ ಅಧಿಕೃತ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಲಾಗುತ್ತೆ. ಅದ್ರಂತೆ, ಪ್ರಯಾಣಿಕರು ಮಿಷನ್ ಅಮಾನತ್-ಆರ್‌ಪಿಎಫ್ ವೆಬ್‌ಸೈಟ್ʼನ (https://wr.indianrailways.gov.in) ಗೆ ಪ್ರಯಾಣಿಕರು ಭೇಟಿ ನೀಡಿ, ಅಲ್ಲಿ ಪೋಸ್ಟ್ ಮಾಡಲಾದ ಲಗೇಜ್ ಫೋಟೋಗಳಲಿ ನಿಮ್ಮ ಲಗೇಜ್ ಕೂಡ ಇದ್ರೆ, ನೀವು ಅದನ್ನ ಹಿಂಪಡೆಯಬಹುದು.