ಹಾವೇರಿ : ಕೇಂದ್ರ ಸರ್ಕಾರದ ಪಿ.ಎಂ.ಕಿಸಾನ್ ಯೋಜನೆಯಡಿ ಜಿಲ್ಲೆಯ 1,96,387 ರೈತರಿಗೆ ಈಗಾಗಲೇ ನೇರ ಆರ್ಥಿಕ ನೆರವು ವರ್ಗಾವಣೆಯು ಚಾಲ್ತಿಯಲ್ಲಿರುತ್ತದೆ. ಈ ಯೋಜನೆಯ ನೆರವು ನೈಜ ಫಲಾನುಭವಿಗಳಿಗೆ ದೊರಕುತ್ತಿರುವುದನ್ನು ಖಾತ್ರಿಪಡಿಸಿಕೊಳ್ಳಲು E-KYC ಮಾಡಿಸುವುದು ಕಡ್ಡಾಯವಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಮಂಜುನಾಥ್ ಅವರು ತಿಳಿಸಿದ್ದಾರೆ.
E-KYC ಯನ್ನು ಎರಡು ವಿಭಾಗದಲ್ಲಿ ಕೈಗೊಳ್ಳಬಹುದಾಗಿದೆ. ರೈತರು https://pmkisan.gov.in ವೆಬ್‍ಸೈಟ್‍ನಲ್ಲಿ Farmers corner £À E-KYC ಅವಕಾಶದಡಿ ಈಗಾಗಲೇ ಪಿ.ಎಂ.ಕಿಸಾನ್ ಯೋಜನೆಯಡಿ ಫಲಾನುಭವಿಗಳಾಗಿರುವ ಪ್ರತಿಯೊಬ್ಬ ರೈತ ಆಧಾರ ಸಂಖ್ಯೆಯನ್ನು ನಂತರ ಆಧಾರ ಸಂಖ್ಯೆಯೊಂದಿಗೆ ನೋಂದಣಿಯಾಗಿರುವ ಮೊಬೈಲ್ ಸಂಖ್ಯೆಯನ್ನು ದಾಖಲಿಸಬೇಕು. ಹೀಗೆ ಸ್ವೀಕರಿಸಿದ ಒಟಿಪಿಯನ್ನು ಪೋರ್ಟನಲ್ಲಿ ದಾಖಲಿಸಿ ”Submit for Auth ‘ ಎಂಬ ಬಟನ್ ಒತ್ತಡಬೇಕು. ಆಗ ತಂತ್ರಾಂಶ ಆಧಾರಿತ ಪರಿಸೀಲನೆ ನಡೆದು E-KYC is successfully submitted ಎಂಬ ವಾಕ್ಯವು ಗೋಚರಿಸುತ್ತದೆ. ಹೀಗೆ ಮೊಬೈಲ್ ಒಟಿಪಿ ಆಧಾರಿತವಾಗಿ ಫಲಾನುಭವಿಯು ಖುದ್ದಾಗಿ E-KYC ಆಗಿದ್ದಲ್ಲಿ E-KYC already done ಎಂಬ ಮಾಹಿತಿ ಗೋಚರಿಸುತ್ತದೆ.
ಈ ಮೇಲಿನಂತೆ ಯಾವ ಫಲಾನುಭವಿಯ ಮೊಬೈಲ್ ಸಂಖ್ಯೆ ಆಧಾರ ಸಂಖ್ಯೆಯೊಂದಿಗೆ ಜೋಡಣೆಯಾಗಿರುವುದಿಲ್ಲವೋ ಅಥವಾ ಯಾರ ಮೊಬೈಲ್ ಸಂಖ್ಯೆಗೆ E-KYC ಗಾಗಿ ಕಳುಹಿಸಿದ ಒಟಿಪಿಯು ಸ್ವೀಕೃತವಾಗುವುದಿಲ್ಲವೋ ಅವರು CSC( Citizen Service Centers ನಾಗರಿಕ ಸೇವಾ ಕೇಂದ್ರ)ಗಳಿಗೆ ತೆರಳಿ, ಅಲ್ಲಿ ಬಯೋಮೆಟ್ರಿಕ್ ಆಧಾರಿತವಾಗಿ E-KYC ಮಾಡಬಹುದಾಗಿರುತ್ತದೆ. ಅಲ್ಲಿ ಕೈ ಬೆರಳಿನ ಗುರುತು ಆಧಾರದ ಮೇಲೆE-KYC ಮಾಡಲಾಗಿರುತ್ತದೆ.
ಈ ಯೋಜನೆಯ ಪ್ರತಿ ಫಲಾನುಭವಿ ರೈತನು ಕೇಂದ್ರ ಸರ್ಕಾರವು ಮುಂದಿನ ಚಾತುರ್ಮಸಿಕದಲ್ಲಿ (ಎಪ್ರಿಲ್ -22 ರಿಂದ ಜುಲೈ -22)ರವರೆಗೆ ನೀಡುವ ಆರ್ಥಿಕ ನೆರವು ಪಡೆಯಲು 31 ಮಾರ್ಚ್ 2022ರೊಳಗಾಗಿ E-KYC ಮಾಡಿಸುವುದು ಕಡ್ಡಾಯವಾಗಿರುತ್ತದೆ.