Breaking News

ಕೈ ನಾಯಕರ ವಿರುದ್ಧ FIR ದಾಖಲು; ಆರೋಪ ಸಾಬೀತಾದರೆ ದಂಡದ ಜತೆ 3 ರಿಂದ 6 ತಿಂಗಳ ಸೆರೆವಾಸ

Spread the love

ಬೆಂಗಳೂರು: ಕಾಂಗ್ರೆಸ್ ನೇತೃತ್ವದ ಮೇಕೆದಾಟು ಪಾದಯಾತ್ರೆ ವಿರುದ್ಧ ಸಮರ ಸಾರಲು ಮುಂದಾಗಿರುವ ಬಿಜೆಪಿ ಸರ್ಕಾರ ಇಂದು 31 ಕಾಂಗ್ರೆಸ್ ನಾಯಕರ ವಿರುದ್ಧ ಎಫ್‌ಐಆರ್ (FIR) ದಾಖಲು ಮಾಡಿದೆ. ಕರೋನಾವೈರಸ್ ಅಟ್ಟಹಾಸದ ನಡುವೆ ಸರ್ಕಾರ ಜಾರಿಗೊಳಿಸಿದ್ದ ವೀಕೆಂಡ್ ಕರ್ಫ್ಯೂ ಲೆಕ್ಕಿಸದೆ ಮೇಕೆದಾಟು ಯೋಜನೆಗೆ ಆಗ್ರಹಿಸಿ ರಾಜ್ಯ ಕಾಂಗ್ರೆಸ್ ನಾಯಕರು ಪಾದಯಾತ್ರೆಯನ್ನು ಆರಂಭಿಸಿದ್ದಾರೆ.

ಈ ಕುರಿತಂತೆ ಕಾನೂನು ಕ್ರಮ ಜರುಗಿಸುವುದಾಗಿ ಸರ್ಕಾರ ತಿಳಿಸಿತ್ತು. ಅದರಂತೆ ಕಾನೂನು ಕ್ರಮಕ್ಕೆ ಮುಂದಾಗಿರುವ ಸರ್ಕಾರ ಎಪಿಡೆಮಿಕ್ ಆಕ್ಟ್ (Epidemic act) ಹಾಗೂ ಸೂಕ್ತ ಕಾನೂನು ಅಡಿಯಲ್ಲಿ ಕಾಂಗ್ರೆಸ್ ಗೆ ಬಿಸಿ ಮುಟ್ಟಿಸಲು ಸಜ್ಜಾಗಿದೆ.

ಕರೋನಾ (Coronavirus) ನಿಯಮಾವಳಿಗಳನ್ನು ಗಾಳಿಗೆ ತೂರಿ ಮೇಕೆದಾಟು ಪಾದಯಾತ್ರೆ (Mekedatu Padayatre) ಕೈಗೊಂಡಿರುವ ಕಾಂಗ್ರೆಸ್ ನಾಯಕರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲಾಗಿದೆ. ಈಗ ಎಫ್ ಐ ಆರ್ ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ (A1) ಮೊದಲ ಆರೋಪಿಯನ್ನಾಗಿ ಮಾಡಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ (A2), ಸಂಸದ ಡಿ ಕೆ ಸುರೇಶ್ (A3) ಸೇರಿದಂತೆ 31 ನಾಯಕರ ವಿರುದ್ಧ ಎಫ್‌ಐಆರ್ (FIR)ದಾಖಲಿಸಲಾಗಿದೆ.

 

ಯಾವ ಸೆಕ್ಷನ್ ಹಾಕಲಾಗಿದೆ; ಶಿಕ್ಷೆ ಪ್ರಮಾಣ ಏನಿದೆ?
31 Bಕೈ ನಾಯಕರ ವಿರುದ್ಧ ಐಪಿಸಿ 141, 143, 290, 336 ಸಹ ಕಲಂ 149 ಹಾಕಿರುವ ಜತೆಗೆ ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧಿನಿಯಮ (Karnataka Epidemics act) 2020 ಕಲಂ 5 (3a) ಅಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರದ ಪರ ತಹಸೀಲ್ದಾರ್ ವಿಶ್ವನಾಥ್ ಕೋರಿದ್ದಾರೆ.

IPC 141: ಕ್ರಿಮಿನಲ್ ಶಕ್ತಿ ಪ್ರದರ್ಶನ ಮಾಡುವ ಮೂಲಕ ಕಾನೂನು ಪ್ರಕಾರ ಯಾವುದೇ ವ್ಯಕ್ತಿಯನ್ನು ತನ್ನ ಕೆಲಸ ಮಾಡಲು ಬಿಡದೆಯಿರುವುದು.

IPC 143: ಶಿಕ್ಷೆ: ಕಾನೂನು ಬಾಹಿರವಾಗಿ ಸಭೆ ನಡೆಸಿದಕ್ಕೆ, ದಂಡ ಹಾಗೂ ಆರು ತಿಂಗಳ ವರೆಗಿನ ಸೆರೆವಾಸ.

IPC 290: ಸಾರ್ವಜನಿಕ ಪ್ರದೇಶಗಳಲ್ಲಿ ಅಸಭ್ಯವರ್ತನೆಗೆ ₹200 ವರೆಗೆ ದಂಡ ವಿಧಿಸಬಹುದು.

IPC 336: ಮಾನವ ಜೀವಕ್ಕೆ ಅಥವಾ ಇತರರ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಯಾವುದೇ ಕಾರ್ಯವನ್ನು ದುಡುಕಿನ ಅಥವಾ ನಿರ್ಲಕ್ಷ್ಯದಿಂದ ಮಾಡಿದವರಿಗೆ, ಮೂರು ತಿಂಗಳವರೆಗೆ ವಿಸ್ತರಿಸಬಹುದಾದ ಜೈಲುವಾಸ ಅಥವಾ ₹200 ಮತ್ತು ₹50 ದಂಡವನ್ನು ವಿಸ್ತರಿಸಬಹುದು ಅಥವಾ ಎರಡರ ಜೊತೆಗೆ ಶಿಕ್ಷೆ ನೀಡಬಹುದು.

ಕಲಂ 149: ಕಾನೂನು ಬಾಹಿರವಾಗಿ ಸಭೆಯಲ್ಲಿ ಪಾಲ್ಗೊಂಡ ಎಲ್ಲರೂ ಅಪರಾಧಿಗಳು


Spread the love

About Laxminews 24x7

Check Also

ಮೃತ ಸರ್ಕಾರಿ ವೈದ್ಯಾಧಿಕಾರಿ ಕೊಠಡಿಯಲ್ಲಿ ಮಾಟಮಂತ್ರ: ಸಾವಿನ ಸುತ್ತ ಅನುಮಾನದ ಹುತ್ತ

Spread the loveಕೋಲಾರ, ಜುಲೈ 07: ಜಿಲ್ಲೆ ಮಾಲೂರು ತಾಲ್ಲೂಕಿನ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವಸಂತ್ ಕುಮಾರ್ ಅವರು ತಮ್ಮ ಉತ್ತಮ ಸೇವೆಯಿಂದಲೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ