Breaking News

ಹುಬ್ಬಳ್ಳಿಯಲ್ಲಿ ಪತಿ ನಡೆಸುತ್ತಿದ್ದ ಲಾಡ್ಜ್​ನಲ್ಲೇ ಮಹಿಳಾ ಪರಿಸರ ಅಭಿಯಂತರ ಅಧಿಕಾರಿ ಆತ್ಮಹತ್ಯೆ!

Spread the love

ಹುಬ್ಬಳ್ಳಿ: ಸರ್ಕಾರಿ ಅಧಿಕಾರಿಯೊಬ್ಬಳು ಲಾಡ್ಜ್ ವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.

ಮೈಸೂರು ಮೂಲದ ಶಾಂತಲಾ ಸುಪ್ರೀತ ಬೆಳಗಾವಿ ಮೃತರು.

ಶಾಂತಲಾ ನೆಲಮಂಗಲದ ಪರಿಸರ ಅಭಿಯಂತರರಾಗಿದ್ದರು. ಇವರು ಭಾನುವಾರ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಡೆತ್ ನೋಟ್​ನಲ್ಲಿ ಏನಿದೆ ಎಂಬುದು ತಿಳಿದುಬಂದಿಲ್ಲ. ಮೃತ ಅಧಿಕಾರಿ ತೀವ್ರವಾದ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಹೇಳಲಾಗ್ತಿದೆ.

ಅಲ್ಲದೇ, ಅಕ್ಟೋಬರ್​ನಲ್ಲಿ ಇವರ ಮಗಳು ಸಹ ಆತ್ಮಹತ್ಯೆಗೆ ಶರಣಾಗಿದ್ದರು. ಇದೀಗ ಶಾಂತಲಾ ಕೂಡಾ ತಮ್ಮ ಪತಿ ನಡೆಸುತ್ತಿದ್ದ ಲಾಡ್ಜ್ ನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.

ಈ ಕುರಿತು ಉಪನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರ ತನಿಖೆಯಿಂದ ಸತ್ಯಾಸತ್ಯತೆ ಹೊರಬರಬೇಕಿದೆ.


Spread the love

About Laxminews 24x7

Check Also

ಗೋಕಾಕ: ತಾಲೂಕಿನ ಪಾಮಲದಿನ್ನಿ ಗ್ರಾಮದಲ್ಲಿ 15ಜನರು ಸೇರಿಕೊಂಡು ಬಸಪ್ಪ ಎಂಬ ಕುಟುಂಬದ ಮೇಲೆ ಹಲ್ಲೆ.

Spread the love ಗೋಕಾಕ: ತಾಲೂಕಿನ ಪಾಮಲದಿನ್ನಿ ಗ್ರಾಮದಲ್ಲಿ 15ಜನರು ಸೇರಿಕೊಂಡು ಬಸಪ್ಪ ಎಂಬ ಕುಟುಂಬದ ಮೇಲೆ ಹಲ್ಲೆ. ಮನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ