Breaking News

ಆಸ್ತಿ ಬರೆಸಿಕೊಂಡು ಮನೆಯಿಂದ ಹೊರ ಹಾಕಿದ್ದ ಮಕ್ಕಳು, ಸೊಸೆಯಂದಿರಿಗೆ ತಕ್ಕ ಪಾಠ ಕಲಿಸಿದ ತಾಯಿ

Spread the love

ಹಾವೇರಿ: ಇಡೀ ಜೀವನ ಮಕ್ಕಳಿಗಾಗಿ (Children) ದುಡಿಯುವ, ಆಸ್ತಿ (Property) ಮಾಡುವ ಹೆತ್ತವರನ್ನು (Parent) ಇಳಿವಯಸ್ಸಿನಲ್ಲಿ ಮಕ್ಕಳು ಸರಿಯಾಗಿ ನೋಡಿಕೊಳ್ಳೋದಿಲ್ಲ ಎಂಬ ಸಮಸ್ಯೆ ಹೊಸದೇನು ಅಲ್ಲ. ಹೆತ್ತವರ ಆಸ್ತಿಯನ್ನೆಲ್ಲಾ ಪಡೆದ ಮಕ್ಕಳು ತಂದೆ-ತಾಯಿಯನ್ನು ಅವರದ್ದೇ ಮನೆಯಿಂದ ಹೊರ ಹಾಕಿರುವ ಘಟನೆಗಳು ನಮ್ಮ ಮಧ್ಯೆ ಸಾಕಷ್ಟಿವೆ. ಅಂತ ಕರುಣೆ ಇಲ್ಲ ಮಕ್ಕಳಿಗೆ ಬಿಸಿ ಮುಟ್ಟಿಸುವಂತ ಸುದ್ದಿ ಇದು. ಆಸ್ತಿಯನ್ನು ತಮ್ಮ ಹೆಸರಿಗೆ ಬರೆಸಿಕೊಂಡು ತಾಯಿಯನ್ನ ಮಕ್ಕಳು ಹೊರಹಾಕಿದ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ವೀರಾಪುರ ಗ್ರಾಮದಲ್ಲಿ ನಡೆದಿದೆ. ಆದ್ರೆ ಈ ಪ್ರಕರಣದಲ್ಲಿ ತಾಯಿ ತನ್ನ ಮಕ್ಕಳ ವಿರುದ್ಧವೇ ಹೋರಾಡಿ ಜಯ ಸಾಧಿಸಿದ್ದಾರೆ. ಇತ್ತೀಚೆಗಷ್ಟೇ ಹಾವೇರಿ ಜಿಲ್ಲೆಯ ಕಂದಾಯ ಅಧಿಕಾರಿಗಳು ವೃದ್ಧ ತಾಯಿಯ ಪರವಾಗಿ ತೀರ್ಪು ನೀಡಿದ್ದಾರೆ.

ಸವಣೂರು ಎಸಿ ಅನ್ನಪೂರ್ಣ ಮುದಕಮ್ಮನವರ್ ಅವರು ಜನವರಿ 6 ರಂದು ತಾಯಿಗೆ, ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ-2007 ರ ಅಡಿಯಲ್ಲಿ ಆಸ್ತಿಯಲ್ಲಿ ಪಾಲು ಮಂಜೂರು ಮಾಡಿದರು.  ಹಾವೇರಿ ಜಿಲ್ಲೆಯ ಹಂಗಳ ತಾಲೂಕಿನ ವೀರಾಪುರ ಗ್ರಾಮದ 76 ವರ್ಷದ ಮಹಿಳೆ ಪ್ರೇಮವ್ವ ಹವಳಣ್ಣನವರ್ ಅವರನ್ನು ಇಬ್ಬರೂ ಪುತ್ರರು ದೂರ ಮಾಡಿದ್ದಾರೆ.  ಎಸಿ ಮತ್ತು ತಹಶೀಲ್ದಾರ್ ನ್ಯಾಯಾಲಯದಲ್ಲಿ ಮೂರು ವರ್ಷಗಳ ಕಾನೂನು ಹೋರಾಟದ ನಂತರ ತಾಯಿ ತನ್ನ ಮಕ್ಕಳಿಂದ ಆಸ್ತಿಯಲ್ಲಿ ಪಾಲು ಪಡೆದಿದ್ದಾರೆ.


Spread the love

About Laxminews 24x7

Check Also

ವರದಕ್ಷಿಣೆ ಕಿರುಕುಳ ಆರೋಪ, ಐಎಸ್‌ಡಿ ಡಿವೈಎಸ್‌ಪಿ ವಿರುದ್ಧ ಎಫ್ಐಆರ್

Spread the love ಬೆಂಗಳೂರು : ಡಿವೈಎಸ್‌ಪಿಯೊಬ್ಬರ ವಿರುದ್ಧ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. 41 ವರ್ಷದ ಮಹಿಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ