ಆ ಮಹಾ ವ್ಯಕ್ತಿಯ ಮನವೊಲಿಸಲು ಊರಿಗೆ ಊರೇ ಅವರ ಬಳಿಗೆ ಬಂದಿದೆ. ಹಾಗಿದ್ದರೇ ಯಾರು ಆ ವ್ಯಕ್ತಿ, ಅಲ್ಲಿ ನಡೆದಿದ್ದಾರೂ ಏನು ಅಂತೀರಾ ಈ ಸ್ಟೋರಿ . ಹೀಗೆ ನೂರಾರು ಸಂಖ್ಯೆಯಲ್ಲಿ ಸೇರಿರುವ ಭಕ್ತ (Devotees) ಸಾಗರ. ನೀವು ಬರಲೇ ಬೇಕು ಎಂದು ಪಟ್ಟು ಹಿಡಿದ ಹಿರಿಯ ನಾಗರೀಕರು. ಇದಕ್ಕೆಲ್ಲ ಸಾಕ್ಷಿಯಾಗಿದ್ದುದು ಹುಬ್ಬಳ್ಳಿಯ ಸಿದ್ಧಾರೂಢ ಮಠದ (siddaruda Mutt hubballi) ಆವರಣ.
ಹೌದು.. ಯಾರೋ ಭಕ್ತರು ಮಾಡಿದ ತಪ್ಪಿನಿಂದ ಸ್ವಾಮೀಜಿಯೊಬ್ಬರು ಮನಸ್ಸಿಗೆ ನೋವು ಮಾಡಿಕೊಂಡು ಸುಮಾರು ಆರು ತಿಂಗಳ ಹಿಂದೆಯೇ ಮಠವನ್ನು ಬಿಟ್ಟು ಬಂದಿದ್ದಾರೆ. ಅಣ್ಣಿಗೇರಿಯ ಶ್ರೀ ಶಿವಕುಮಾರ್ ಸ್ವಾಮೀಜಿಯೇ (Annigeri Sri Shivakumar Swamjiji) ಭಕ್ತರೊಬ್ಬರು ಮಾಡಿದ ನಿಂದನೆಯಿಂದ ಮಠ ತೊರೆದು ಹುಬ್ಬಳ್ಳಿಗೆ ಬಂದಿದ್ದಾರೆ.
ಶ್ರೀಗಳ ಮನವೊಲಿಕೆಗೆ ಇಡೀ ಊರು ಆಗಮನ
ಈಗ ಸ್ವಾಮೀಜಿಯನ್ನು ಮಠಕ್ಕೆ ಕರೆ ತರಲು ಭಕ್ತ ಸಾಗರವೇ ಹರಿದು ಬಂದಿದೆ. ಬೆಳಿಗ್ಗೆಯಿಂದಲೇ ಸ್ವಾಮೀಜಿಯವರ ಮನವೊಲಿಸಲು ಮುಂದಾಗಿದ್ದು, ಸ್ವಾಮೀಜಿಯವರನ್ನು ಕರೆದುಕೊಂಡೇ ಹೋಗುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ.
: ಕಾಂಗ್ರೆಸ್ನಲ್ಲಿದ್ದಾಗ ಡಿಕೆಶಿಯಿಂದ ಕಿರುಕುಳ ಆಗಿತ್ತು, 2023ಕ್ಕೆ ಕನಕಪುರದಿಂದ ಸ್ಪರ್ಧೆ: CP Yogeeshwara
ಯಾರೋ ಒಬ್ಬ ವ್ಯಕ್ತಿ ಮಾಡಿದ ಮೂರ್ಖತನದಿಂದಾಗಿ ಈ ರೀತಿಯ ಘಟನೆಯಾಗಿದೆ. ನಮ್ಮ ಊರಿನ ಕಲ್ಯಾಣಕ್ಕೆ ಶ್ರಮಿಸಿದ ಶ್ರೀಗಳನ್ನು ಖಂಡಿತಾ ವಾಪಸ್ ಮಠಕ್ಕೆ ಕರೆದೊಯ್ಯುತ್ತೇನೆ ಎನ್ನೋ ವಿಶ್ವಾಸದಲ್ಲಿದ್ದಾರೆ ಅಣ್ಣಿಗೇರಿ ಪಟ್ಟಣದ ಭಕ್ತರು.
6 ತಿಂಗಳ ಹಿಂದೆಯೇ ಮಠ ತೊರೆದ ಸ್ವಾಮೀಜಿ
ಇನ್ನು ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದ ದಾಸೋಹ ಮಠದ ಶಿವಕುಮಾರ್ ಸ್ವಾಮೀಜಿ 6 ತಿಂಗಳ ಹಿಂದೆಯೇ ಮಠ ತೊರೆದಿದ್ದರು. ಮಠದ ಆಡಳಿತ ಮಂಡಳಿಯ ವ್ಯಕ್ತಿಯಿಂದ ಸ್ವಾಮೀಜಿಗೆ ನಿಂದನೆ ಆರೋಪ ಹಿನ್ನೆಲೆಯಲ್ಲಿ ಮಠವನ್ನು ತೊರೆದಿದ್ದ ಸ್ವಾಮೀಜಿ ಹುಬ್ಬಳ್ಳಿಯ ಸಿದ್ಧಾರೂಢರ ಮಠದಲ್ಲಿ ವಾಸ್ತವ್ಯ ಹೂಡಿದ್ದಾರೆ.
ಈ ವಿಷಯ ತಿಳಿದು ಸಿದ್ಧಾರೂಢ ಮಠಕ್ಕೆ ಆಗಮಿಸಿರೋ ಭಕ್ತರು ಗುರುವಾರ ಮಠಕ್ಕೆ ಆಗಮಿಸುವಂತೆ ಸ್ವಾಮೀಜಿಯವರನ್ನು ಮನವೊಲಿಸುತ್ತಿದ್ದಾರೆ.
: ನೆ.