ಹುಬ್ಬಳ್ಳಿ: ಕಿಮ್ಸ್ ಆಸ್ಪತ್ರೆಗೆ ಪ್ರತಿದಿನವೂ ನೂರಾರು ಬಡ ರೋಗಿಗಳು ಬರುತ್ತಾರೆ. ತುರ್ತು ಸಮಯದಲ್ಲಿ ವಾಹನ ಸೇವೆ ತುಂಬ ಮುಖ್ಯವಾಗಿದ್ದು, ಆ ನಿಟ್ಟಿನಲ್ಲಿ ಸೇವಾ ಭಾರತಿ ಟ್ರಸ್ಟ್ ಆಂಬುಲೆನ್ಸ್ ನೀಡಿರುವುದು ಖುಷಿಯ ಸಂಗತಿ ಎಂದು ಕಿಮ್ಸ್ ನಿರ್ದೇಶಕ ರಾಮಲಿಂಗಪ್ಪ ಅಂಟರತಾನಿ ಹೇಳಿದರು.
ಕಿಮ್ಸ್ ಆಸ್ಪತ್ರೆಗೆ ಸೇವಾ ಭಾರತಿ ಟ್ರಸ್ಟ್ ಉಚಿತವಾಗಿ ಅಂಬುಲೆನ್ಸ್ ನೀಡಿದ್ದು, ಅದನ್ನು ಕೀಮ್ಸ್ ಆಸ್ಪತ್ರೆಯ ಆವರಣದಲ್ಲಿ ಹಸ್ತಾಂತರ ಮಾಡಲಾಯಿತು. ನಂತರ ರಾಮಲಿಂಗಪ್ಪ ಅಂಟರತಾನಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಸೇವಾ ಭಾರತಿ ಟ್ರಸ್ಟ್ ನಿರಂತರ ಜನಸಾಮಾನ್ಯರ ಸೇವೆಗೆ ಅಣಿಯಾಗಿದೆ. ಕೊರೊನಾ ಸಂದರ್ಭದಲ್ಲಿಯೂ ಈ ಟ್ರಸ್ಟ್ ಉತ್ತಮ ನೆರವು ನೀಡಿದೆ. ನಿಜಕ್ಕೂ ಸೇವಾ ಭಾರತಿ ಟ್ರಸ್ಟ್ ಇತರರಿಗೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು.