ಬೆಳಗಾವಿಯ ಸುವರ್ಣಸೌಧದಲ್ಲಿ ಅಧಿವೇಶನ ಹಿನ್ನೆಲೆ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಸುವರ್ಣಸೌಧ ಸಮೀಪದಲ್ಲಿಯೇ ಇರುವ ಹಿರೇಬಾಗೇವಾಡಿ ಗ್ರಾಮದ ಪ್ರತಿಷ್ಠಿತ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್‍ಗೆ ನಿನ್ನೆ ರಾತ್ರಿ ಖದೀಮರು ಕನ್ನ ಹಾಕಿದ್ದು. ಕಳ್ಳತನ ವಿಫಲಯತ್ನವಾಗಿದೆ.
ಬ್ಯಾಂಕಿನ ಮುಂಬದಿಯ ಬಾಗಿಲನ್ನು ತೆರೆಯದೆ ಹಿಂಭಾಗದ ಬಾಗಿಲ ಮೂಲಕ ಕಳ್ಳತನಕ್ಕೆ ಯತ್ನಿಸಿರುವುದು ಬೆಳಕಿಗೆ ಬಂದಿದೆ. ನಿನ್ನೆ ರಾತ್ರಿ ಬ್ಯಾಂಕ್‍ನ ಹಿಂಬಾಗಿಲ ಮೂಲಕ ನುಗ್ಗಿರುವ ಕಳ್ಳರು ಗ್ಯಾಸ್ ಕಟರ್ ಮೂಲಕ ಹಣ ತುಂಬುವ ಯಂತ್ರವನ್ನು ಎಟಿಎಂ ಮಷಿನ್ ಎಂದು ತಿಳಿದು ಕತ್ತರಿಸಿ; ಕ್ಯಾಮೆರಾ ವೈರ್‍ಗಳನ್ನು ಕಟ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಬ್ಯಾಂಕ್ ದರೋಡೆಗೆ ವಿಫಲ ಯತ್ನ ನಡೆದಿದೆ ಎಂದು ಹಿರೇಬಾಗೇವಾಡಿ ಠಾಣೆ ಸಿಪಿಐ ವಿಜಯಕುಮಾರ್ ಸಿನ್ನೂರ ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಕಳ್ಳರಿಗೆ ಬೀಸಿದ್ದು. ಕಳ್ಳತನ ಘಟನೆಯಿಂದ ಹಿರೇಬಾಗೇವಾಡಿ ಸೇರಿದಂತೆ ಸುತ್ತಲಿನ ಗ್ರಾಮಗಳ ಜನರು ಭೀತಿಗೆ ಒಳಗಾಗಿದ್ದಾರೆ.
 Laxmi News 24×7
Laxmi News 24×7
				 
		 
						
					