ಮಹಾರಾಷ್ಟ್ರ ಏಕೀಕರಣ ಸಮಿತಿಯಿಂದ ಆಯೋಜಸಲಾಗಿದ್ದ ಮಹಾಮೇಳಾವಾ ಸ್ಟೇಜ್ ತೆರವುಗೊಳಿಸಲು ಮುಂದಾದ ಬೆಳಗಾವಿಯ ಪೊಲೀಸರು ಮತ್ತು ಪಾಲಿಕೆ ಸಿಬ್ಬಂದಿ ನಡುವೆ ವಾಗ್ದಾದ ನಡೆದಿದೆ.
ಬೆಳಗಾವಿಯಲ್ಲಿ ಇಂದು ಕರ್ನಾಟಕ ಸರ್ಕಾರದಿಂದ ಚಳಿಗಾಲದ ಅಧಿವೇಶನ ಆಯೋಜಿಸಲಾಗಿದೆ. ಪ್ರತಿಬಾರಿಯಂತೆ ಈ ಬಾರಿಯೂ ಅಧಿವೇಶನವನ್ನ ವಿರೋಧಿಸಿ ಮಹಾರಾಷ್ಟ್ರ ಏಕೀಕರಣ ಸಮಿತಿಯಿಂದ ಮಹಾಮೇಳಾವಾ ಆಯೋಜಿಸಿತ್ತು.
ಆದರೇ ಬೆಳಿಗ್ಗೆ ವರೆಗೆ ಸಮಿತಿಗೆ ಮಹಾಮೇಳಾವಾವನ್ನ ಆಯೋಜಿಸಲು ಯಾವುದೇ ಅನುಮತಿಯನ್ನ ಪಾಲಿಕೆಯಾಗಲಿ, ಪೊಲೀಸ್ ಇಲಾಖೆಯಾಗಲಿ ನೀಡಿರಲಿಲ್ಲ. ಆದ್ಧರಿಂದ ಇಂದು ಬೆಳಿಗ್ಗೆ
ಪೊಲೀಸರೊಂದಿಗೆ ಆಗಮಿಸಿದ ಮಹಾನಗರ ಪಾಲಿಕೆ ಅಧಿಕಾರಿಗಳು ವೇದಿಕೆಯನ್ನ ತೆರವುಗೊಳಿಸಲು ಮುಂದಾಗಿದರು. ಇದಕ್ಕೆ ವಿರೋಧಿಸಿ ಸಮಿತಿಯ ಕಾರ್ಯಕರ್ತರು ಪೊಲೀಸ್‌ರ ಸಮ್ಮುಖದಲ್ಲೇ ಪಾಲಿಕೆ ಅಧಿಕಾರಿಗಳಿಗೆ ಆವಾಜ್ ಹಾಕಿದ್ದಾರೆ.