ಕೋವಿಡ್ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ. ಈ ಬಗ್ಗೆ ಆರೋಗ್ಯ ಸಚಿವರಿಗೂ ಸೂಚನೆ ನೀಡಿದ್ದೇನೆ. ಲಾಕ್ ಡೌನ್ ಪ್ರಸಾಪ್ತ ಇಲ್ಲ. ಲಾಕ್ ಡೌನ್ ಮಾಡುವುದಿಲ್ಲ. ಕ್ರಿಸ್ ಮಸ್ ಹಾಗು ಹೊಸ ವರ್ಷ ಸಂಭ್ರಮಾಚರಣೆ ವೇಳೆ ನಿಬರ್ಂಧ ಹೇರುವ ಬಗ್ಗೆ ತೀರ್ಮಾನ ಮಾಡಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಿಎಂ ಬೊಮ್ಮಾಯಿ ಅವರು ಪರಿಷತ್ ಚುನಾವಣೆ ಮತ್ತು ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗಿಯಾಕೋಕೆ ಬಂದಿದ್ದೇನೆ. ಕೋವಿಡ್ ಸ್ಪೋಟ ಹಿನ್ನೆಲೆ ಅಗತ್ಯ ಎಲ್ಲ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿದ್ದೇವೆ. ಪ್ರತಿ ದಿನ ಬೆಂಗಳೂರು ಏರ್‍ಪೋರ್ಟಗೆ 2 ಸಾವಿರದಿಂದ 2500 ಜನರು ಬರುತ್ತಾರೆ, ಅದೇ ರೀತಿ ಮಂಗಳೂರು ಏರ್‍ಪೋರ್ಟಗೂ ಬರುತ್ತಾರೆ. ಹೀಗೆ ಬಂದ ಎಲ್ಲರಿಗೂ ಸಂಪೂರ್ಣವಾಗಿ ಟೆಸ್ಟ್ ಮಾಡಬೇಕಿದೆ. ಕಡ್ಡಾಯವಾಗಿ ಎಲ್ಲರನ್ನು ಟೆಸ್ಟ್ ಮಾಡುವಂತೆ ಸೂಚನೆ ಕೊಟ್ಟಿದ್ದೇನೆ. ಇನ್ನು ಎನ್‍ಸಿಬಿಎಸ್‍ಗೆ ಸ್ಯಾಂಪಲ್ ಸಹ ಈಗಾಗಲೇ ಕಳಿಸಿದ್ದೇವೆ. ಕೇರಳ ಬಾರ್ಡರ್‍ಗಳಲ್ಲಿ ಹೆಚ್ಚಿನ ತಪಾಸಣೆ ಮುಂದುವರೆಸಿದ್ದೇವೆ ಬೇರೆಡೆ ಡೆಲ್ಟಾ ಬಂದಿದೆ, ಅದರ ಬಗ್ಗೆಯೂ ಸಹ ಗಮನಹರಿಸಿದ್ದೇವೆ. ಬೇರೆ ಬೇರೆ ಕಡೆಯಿಂದ ಬಂದವರ ಚಲನವಲನ ಗಮನಿಸುತ್ತಿದ್ದೇವೆ. ವಿದೇಶದಿಂದ ಮತ್ತು ಕೇರಳದಿಂದ ಬಂದವರ ಮೇಲೆ ವಿಶೇಷ ನಿಗಾ ಇಡಲು ಸೂಚನೆ ನೀಡಿದ್ದೇವೆ ಎಂದರು.