Breaking News

ಸುಂದರಿಯರ ಜತೆ ಪಾರ್ಟಿಗೆ ಹೋಗಿ ಎಲ್ಲವನ್ನೂ ಕಳೆದುಕೊಂಡ ಯುವಕರು! ಬಟ್ಟೆಯೂ ಸಿಗದೇ ಗೋಳಾಡಿದರು!

Spread the love

ಮೀರತ್: ಇದೀಗ ಎಲ್ಲೆಡೆ ಹುಡುಗಿಯರೇ ಮೋಸ ಹೋಗಬೇಕೆಂದೇನೂ ಇಲ್ಲ. ಇಂದು ಯುವತಿಯರು, ಮಹಿಳೆಯರು ಪುರುಷರನ್ನು ಮೋಸದ ಬಲೆಗೆ ಸಿಲುಕಿಸುವ ಮಹಾ ಜಾಲಗಳನ್ನು ಬಳಸಿ, ಅವರನ್ನು ಹಳ್ಳಕ್ಕೆ ಬೀಳಿಸುತ್ತಿದ್ದಾರೆ.
ಇಂಥದ್ದೇ ಒಂದು ಜಾಲದಿಂದ ಯುವಕರು ಮೋಸ ಹೋಗಿದ್ದೂ ಅಲ್ಲದೇ ವಾಪಸ್‌ ಬರಲು ಬಟ್ಟೆಯೂ ಸಿಗದಂಥ ಪೇಚಿಗೆ ಸಿಲುಕಿದ ಘಟನೆ ಉತ್ತರ ಪ್ರದೇಶದ ಮೀರತ್‌ನ ಖರ್ಖೌಡಾ ಪ್ರದೇಶದಲ್ಲಿ ನಡೆದಿದೆ.

ಕೆಲವು ಯುವತಿಯರು ಪಾರ್ಟಿಗೆ ಕರೆದರು ಎಂದು ಯುವಕರು ಅವರ ಹಿಂದೆ ಹೋಗಿದ್ದಾರೆ. ಆರಂಭದಲ್ಲಿ ಯುವಕರನ್ನು ರಮಿಸುವಂತೆ ಮಾಡಿದ ಯುವತಿಯರು ನಂತರ ಯುವಕರನ್ನು ಬೆತ್ತಲೆಗೊಳಿಸಿದ್ದಾರೆ. ಅವರ ಜತೆ ತಾವೂ ನಿಂತು ಅಶ್ಲೀಲ ಎನಿಸುವ ವಿಡಿಯೋ ರೆಕಾರ್ಡಿಂಗ್‌ ಮಾಡಿಕೊಂಡಿದ್ದಾರೆ. ಇವರೆಲ್ಲರೂ ‘ಮರ್ಯಾದಾಸ್ಥ’ ಕುಟುಂಬದ ಯುವಕರಾಗಿರುವ ಕಾರಣ, ಅಂಥವರನ್ನೇ ಟಾರ್ಗೆಟ್‌ ಮಾಡಿಕೊಂಡಿರುವ ಈ ಯುವತಿಯರು ವಿಡಿಯೋ ರಿಕಾರ್ಡಿಂಗ್‌ ಅಲ್ಲಿಯೇ ತೋರಿಸಿ ಬ್ಲ್ಯಾಕ್‌ಮೇಲ್‌ ಮಾಡಿದ್ದಾರೆ.

ವಿಡಿಯೋದಲ್ಲಿ ಈ ಯುವಕರೇ ಆ ಯುವತಿಯರ ಮೇಲೆ ಅತ್ಯಾಚಾರ ಮಾಡಿದಂತೆ ಇಲ್ಲವೇ ಅಸಭ್ಯವಾಗಿ ವರ್ತಿಸಿದಂತೆ ರಿಕಾರ್ಡ್‌ ಆಗಿದೆ. ಈ ವಿಡಿಯೋ ಇಟ್ಟುಕೊಂಡು ಯುವಕರಿಗೆ ಆರಂಭದಲ್ಲಿ ಮೂರು ಲಕ್ಷ ರೂಪಯಿ ಬೇಡಿಕೆ ಇಟ್ಟಿದ್ದಾರೆ. ಅಷ್ಟು ಹಣ ಇಲ್ಲ ಎಂದಾಗ ಮನೆಗೆ ಹೋಗಿ ಹಣವನ್ನು ತಂದು ನೀಡುವಂತೆ, ಇಲ್ಲವೇ ಈ ವಿಡಿಯೋ ವೈರಲ್‌ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಯುವಕರಿಗೆ ಗನ್‌ ತೋರಿಸಿ ಮೊಬೈಲ್‌ ಫೋನ್‌, ಚಿನ್ನದ ಸರ,ಉಂಗುರ ಕಿತ್ತುಕೊಂಡು ಅವರ ಪರ್ಸ್‌ನಲ್ಲಿದ್ದ ಹಣವನ್ನೆಲ್ಲಾ ಲಪಟಾಯಿಸಿಕೊಂಡು ಕಳುಹಿಸಿದ್ದಾರೆ.

ಒಂದು ವೇಳೆ ಅದನ್ನೆಲ್ಲಾ ಕೊಡದೇ ಹೋದರೆ ಹಾಕಿಕೊಳ್ಳಲು ಬಟ್ಟೆ ಕೊಡುವುದಿಲ್ಲ ಎಂದು ಬೆದರಿಕೆ ಹಾಕಿದ್ದರಿಂದ ಯುವಕರು ಎಲ್ಲವನ್ನೂ ಕೊಟ್ಟು ಬಂದಿದ್ದಾರೆ. ಈ ಸಂಬಂಧ ಎಲ್ಲ ಕಳೆದುಕೊಂಡ ಯುವಕರಾದ ಜುಬೇರ್ ಮತ್ತು ಆತನ ಸ್ನೇಹಿತ ಶಹಬಾಜ್‌ ಪೊಲೀಸರಲ್ಲಿ ದೂರು ದಾಖಲು ಮಾಡಿ ಈ ವಿಷಯ ತಿಳಿಸಿದ್ದಾರೆ. ಮೂರು ಲಕ್ಷ ರೂ. ಕೊಡಲು ಒಪ್ಪಿಕೊಂಡು ಬಂದಿದ್ದರಿಂದ ತಮ್ಮನ್ನು ಬಿಡುಗಡೆ ಮಾಡಿದ್ದಾರೆ ಎದಿದ್ದಾರೆ.

ಈ ಯುವತಿಯರ ಜತೆ ಆರು ಮಂದಿ ಯುವಕರೂ ಶಾಮೀಲಾಗಿರುವುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ. ಈ ಹಿಂದೆ ಕೂಡ ಇಂಥದ್ದೇ ಸೆಕ್ಸ್‌ ರ್ಯಾರೇಟ್‌ ಪತ್ತೆ ಮಾಡಲಾಗಿದೆ. ಯುವಕರನ್ನು ಯುವತಿಯರು ಈ ರೀತಿ ಬಳಸಿಕೊಳ್ಳುತ್ತಿರುವುದು ತಿಳಿದುಬಂದಿದೆ. ಈ ಪ್ರಕರಣದ ತನಿಖೆ ನಡೆಸಲಾಗುತ್ತಿದ್ದು, ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು ಎಂದು ಇನ್ಸ್‌ಪೆಕ್ಟರ್ ಸಂಜಯ್ ಶರ್ಮಾ ತಿಳಿಸಿದ್ದಾರೆ.

ಹೆಚ್ಚಾಗಿ ಇಂಥವರು ಯುವಕರನ್ನು ಮೊದಲೇ ಗುರುತಿಸಿ ಆನ್‌ಲೈನ್‌ ಮೂಲಕ ಅವರನ್ನು ಪರಿಚಯ ಮಾಡಿಕೊಂಡು, ನಂತರ ನಿಧಾನವಾಗಿ ಬಣ್ಣಬಣ್ಣದ ಮಾತುಗಳನ್ನಾಗಿ ಯುವಕರನ್ನು ಮರುಳು ಮಾಡಿ ತಮ್ಮ ಜಾಲಕ್ಕೆ ಸಿಲುಕಿಸುತ್ತಿರುವುದಾಗಿ ಪೊಲೀಸರು ಹೇಳಿದ್ದಾರೆ.


Spread the love

About Laxminews 24x7

Check Also

ಡಿಜಿಟಲ್ ಅರೆಸ್ಟ್ ಮೂಲಕ ಮಂಗಳೂರಿನ ಮಹಿಳೆಗೆ 3.15 ಕೋಟಿ ರೂಪಾಯಿ ವಂಚನೆ

Spread the loveಮಂಗಳೂರು: ಮಂಗಳೂರಿನ ಮಹಿಳೆಯೊಬ್ಬರು ಡಿಜಿಟಲ್ ಅರೆಸ್ಟ್ ಎಂಬ ಹೆಸರಿನಲ್ಲಿ ನಡೆದ ಆನ್‌ಲೈನ್ ವಂಚನೆಯಲ್ಲಿ 3 ಕೋಟಿ 15 ಲಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ