ನ್ಯೂಯಾರ್ಕ್:ಫೇಸ್‌ಬುಕ್ ತನ್ನ ಮುಖ ಗುರುತಿಸುವಿಕೆ (face recognition) ವ್ಯವಸ್ಥೆಯನ್ನು ಸ್ಥಗಿತಗೊಳಿಸುವುದಾಗಿ ಮತ್ತು 1 ಬಿಲಿಯನ್‌ಗಿಂತಲೂ ಹೆಚ್ಚು ಜನರ ಫೇಸ್‌ಪ್ರಿಂಟ್‌ಗಳನ್ನು ಅಳಿಸುವುದಾಗಿ ಹೇಳಿದೆ. ‘ಈ ಬದಲಾವಣೆಯು ತಂತ್ರಜ್ಞಾನದ ಇತಿಹಾಸದಲ್ಲಿ ಮುಖದ ಗುರುತಿಸುವಿಕೆ ಬಳಕೆಯಲ್ಲಿನ ಅತಿದೊಡ್ಡ ಬದಲಾವಣೆಗಳಲ್ಲಿ ಒಂದಾಗಿದೆ’ ಎಂದು ಫೇಸ್‌ಬುಕ್‌ನ ಹೊಸ ಪೋಷಕ ಕಂಪನಿ ಮೆಟಾದ ಕೃತಕ ಬುದ್ಧಿಮತ್ತೆಯ ಉಪಾಧ್ಯಕ್ಷ ಜೆರೋಮ್ ಪೆಸೆಂಟಿ ಅವರು ಹೇಳಿದ್ದಾರೆ.
‘ಫೇಸ್‌ಬುಕ್‌ನ ದೈನಂದಿನ ಸಕ್ರಿಯ ಬಳಕೆದಾರರಲ್ಲಿ ಮೂರನೇ ಒಂದು ಜನರು ನಮ್ಮ ಮುಖ ಗುರುತಿಸುವಿಕೆ ಸೆಟ್ಟಿಂಗ್‌ಗೆ ಆಯ್ಕೆ ಮಾಡಿಕೊಂಡಿದ್ದಾರೆ ಮತ್ತು ಗುರುತಿಸಲು ಸಮರ್ಥರಾಗಿದ್ದರು ಮತ್ತು ಅದನ್ನು ತೆಗೆದುಹಾಕುವುದರಿಂದ ಒಂದು ಬಿಲಿಯನ್‌ಗಿಂತಲೂ ಹೆಚ್ಚು ಜನರ ವೈಯಕ್ತಿಕ ಮುಖ ಗುರುತಿಸುವಿಕೆ ಟೆಂಪ್ಲೇಟ್‌ಗಳನ್ನು ಅಳಿಸಲಾಗುತ್ತದೆ.’ ಎಂದು ಹೇಳಿದರು.ಫೇಸ್‌ಬುಕ್‌ನ ದೈನಂದಿನ ಸಕ್ರಿಯ ಬಳಕೆದಾರರಲ್ಲಿ ಮೂರನೇ ಒಂದು ಭಾಗಕ್ಕಿಂತ ಹೆಚ್ಚು ಜನರು ತಮ್ಮ face recognition ವ್ಯವಸ್ಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅಂದರೆ ಸುಮಾರು 640 ಮಿಲಿಯನ್ ಜನರು ಆಯ್ಕೆ ಮಾಡಿಕೊಂಡಿದ್ದರು. ಸೆಟ್ಟಿಂಗ್ ಅನ್ನು ತೆಗೆದುಹಾಕುವುದರಿಂದ ಒಂದು ಶತಕೋಟಿಗೂ ಹೆಚ್ಚು ಜನರ ವೈಯಕ್ತಿಕ ಮುಖ ಗುರುತಿಸುವಿಕೆ ಟೆಂಪ್ಲೇಟ್‌ಗಳನ್ನು ಅಳಿಸಲಾಗುತ್ತದೆ ಎಂದು, ಪೆಸೆಂಟಿ ಹೇಳಿದರು.
ಫೇಸ್‌ಬುಕ್ ಒಂದು ದಶಕದ ಹಿಂದೆ ಅದನ್ನು ಪರಿಚಯಿಸಿದ ನಂತರ ಮುಖ ಗುರುತಿಸುವಿಕೆಯ ಬಳಕೆಯನ್ನು ಈಗ ಹಿಂತೆಗೆದುಕೊಳ್ಳುತ್ತಿದೆ.