Breaking News

ದೇಶದ ಇತಿಹಾಸದಲ್ಲೇ ಗಾಂಧೀಜಿ ಬಿಟ್ರೆ 25 ಲಕ್ಷಕ್ಕೂ ಅಧಿಕ ಮಂದಿ ಅಂತಿಮ ದರ್ಶನ ಪಡೆದ ಏಕೈಕ ವ್ಯಕ್ತಿ ಪುನೀತ್

Spread the love

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಕಾಲಿಕ ನಿಧನಕ್ಕೆ ನಾಡಿಗೆ ನಾಡೇ ಕಂಬನಿ ಮಿಡಿದಿದೆ. ಲಕ್ಷಾಂತರ ಮಂದಿ ಪುನೀತ್ ರಾಜಕುಮಾರ್ ಅವರ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ.

ಅಪಾರ ಸಂಖ್ಯೆಯ ಗಣ್ಯರು, ಲಕ್ಷಾಂತರ ಅಭಿಮಾನಿಗಳು 45 ಗಂಟೆಗೂ ಅಧಿಕ ಕಾಲ ಕಂಠೀರವ ಕ್ರೀಡಾಂಗಣದಲ್ಲಿ ಸಾಗರೋಪಾದಿಯಲ್ಲಿ ಹರಿದುಬಂದು ಅಂತಿಮ ದರ್ಶನ ಪಡೆದು ಕೊಂಡಿದ್ದಾರೆ.

25 ಲಕ್ಷಕ್ಕೂ ಅಧಿಕ ಮಂದಿ ಪುನೀತ್ ರಾಜ್ ಕುಮಾರ್ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ.

ರಾಜ್ಯ ಸರ್ಕಾರ, ಪೊಲೀಸ್ ಇಲಾಖೆ, ರಾಜಕುಮಾರ್ ಕುಟುಂಬದವರು, ಅಭಿಮಾನಿಗಳು ಯಾವುದೇ ಅವ್ಯವಸ್ಥೆ ಆಗದಂತೆ ಎಚ್ಚರಿಕೆ ವಹಿಸಿದ್ದು, ಶುಕ್ರವಾರ ಸಂಜೆಯಿಂದ ಭಾನುವಾರ ಬೆಳಗಿನ ಜಾವದವರೆಗೆ ನಿರಂತರವಾಗಿ ಅಭಿಮಾನಿಗಳು ದರ್ಶನ ಪಡೆದುಕೊಂಡಿದ್ದಾರೆ. ಇತಿಹಾಸದಲ್ಲಿ ಮಹಾತ್ಮ ಗಾಂಧೀಜಿ ಹೊರತುಪಡಿಸಿ 25 ಲಕ್ಷಕ್ಕೂ ಅಧಿಕ ಮಂದಿ ದರ್ಶನ ಪಡೆದ ಏಕೈಕ ವ್ಯಕ್ತಿ ಪುನೀತ್ ರಾಜಕುಮಾರ್ ಎಂಬ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.


Spread the love

About Laxminews 24x7

Check Also

ಮೂಡಲಗಿ ವಲಯದ ಅತಿಥಿ ಶಿಕ್ಷಕರ ವೇತನ ವಿತರಿಸಿದ ಸರ್ವೋತ್ತಮ ಜಾರಕಿಹೊಳಿ*

Spread the love ಗೋಕಾಕ-* ಧಾರವಾಡ ವಲಯದಲ್ಲಿಯೇ ಮೂಡಲಗಿ ಶೈಕ್ಷಣಿಕ ವಲಯದ ಸಾಧನೆಯನ್ನು ಮೆಚ್ಚುವಂತಹದ್ದು, ಅದರಲ್ಲಿಯೂ ಅತಿಥಿ ಶಿಕ್ಷಕರನ್ನು ಇಟ್ಟುಕೊಂಡು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ