Breaking News

ಸಿದ್ದರಾಮಯ್ಯ, ನಿಮಗೂ 2 ಡೋಸ್ ಲಸಿಕೆ ಸಿಕ್ಕಿದೆಯಲ್ಲವೇ? : ಬಿಜೆಪಿ ಪ್ರಶ್ನೆ

Spread the love

ಬೆಂಗಳೂರು :ನಿಮಗೂ 2 ಡೋಸ್ ಲಸಿಕೆ ಸಿಕ್ಕಿದೆಯಲ್ಲವೇ ಎಂದು ರಾಜ್ಯ ಬಿಜೆಪಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿ ಶುಕ್ರವಾರ ಟ್ವೀಟ್ ಮಾಡಿದೆ.

ನೂರು ಕೋಟಿ ಲಸಿಕೆ ಪೂರ್ಣಗೊಳಿಸಿದ ಬಳಿಕ ಟೀಕಿಸಿದ್ದ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ ಸರಣಿ ಟ್ವೀಟ್ ಗಳನ್ನು ಮಾಡಿದೆ.

‘ವಿವಿಧ ದೇಶಗಳು ವಿತರಿಸಿದ ಲಸಿಕೆ ಪ್ರಮಾಣ

ಅಮೆರಿಕಾ – 41.01ಕೋಟಿ
ಜಪಾನ್ – 18.21ಕೋಟಿ
ಜರ್ಮನಿ – 11.12ಕೋಟಿ
ರಷ್ಯಾ – 9.98ಕೋಟಿ
ಬ್ರಿಟನ್ – 9.53ಕೋಟಿ

ಇದೇ ಅವಧಿಯಲ್ಲಿ ಭಾರತ 100 ಕೋಟಿ ಡೋಸ್ ಲಸಿಕೆ ವಿತರಿಸಿದೆ. ದೇಶವಾಸಿಗಳ ಆರೋಗ್ಯ ರಕ್ಷಣೆಗಾಗಿ ಮಾಡಿದ ಕೆಲಸಕ್ಕಾಗಿ ಸಂಭ್ರಮಿಸುವುದು ತಪ್ಪೇ ಸಿದ್ದರಾಮಯ್ಯ?’ ಎಂದು ಪ್ರಶ್ನಿಸಿದೆ.

‘ರಾಜ್ಯದಲ್ಲಿ ಇದುವರೆಗೆ 6.21 ಕೋಟಿಗೂ ಅಧಿಕ ಲಸಿಕೆ ವಿತರಿಸಲಾಗಿದೆ.4.15 ಕೋಟಿಗೂ ಅಧಿಕ ಜನರಿಗೆ ಮೊದಲ ಡೋಸ್‌ ಹಾಗೂ 2.06 ಕೋಟಿಗೂ ಅಧಿಕ ಜನರಿಗೆ ಎರಡನೇ ಡೋಸ್‌ ನೀಡಲಾಗಿದೆ. 18 ರಿಂದ 44 ವರ್ಷದೊಳಗಿನವರಿಗೆ 2.31 ಕೋಟಿಗೂ ಅಧಿಕ ಮೊದಲ ಡೋಸ್ ನೀಡಲಾಗಿದೆ.ಸಿದ್ದರಾಮಯ್ಯ ನಿಮಗೂ 2 ಡೋಸ್ ಲಸಿಕೆ ಸಿಕ್ಕಿದೆಯಲ್ಲವೇ?’ ಎಂದು ಟ್ವೀಟ್ ನಲ್ಲಿ ಪ್ರಶ್ನಿಸಿದೆ.

‘ಕೋವಿಡ್ ದುರಿತ ಕಾಲದಲ್ಲಿ ಮಾನವೀಯ ನೆಲೆಯಲ್ಲಿ 95 ಕ್ಕೂ ಅಧಿಕ ದೇಶಗಳಿಗೆ ಭಾರತ ಲಸಿಕೆ ಪೂರೈಸಿದೆ.ವಿಶ್ವಸಂಸ್ಥೆಯೂ ಸೇರಿದಂತೆ ಹಲವು ರಾಷ್ಟ್ರಗಳು ಭಾರತದ ಈ ನಡೆಯನ್ನು ಶ್ಲಾಘಿಸಿವೆ. ಇದನ್ನೂ ನೀವು ವೈಫಲ್ಯ ಎಂದು ಪರಿಗಣಿಸುವಿರಾ? ಇದು ದೃಷ್ಟಿದೋಷವೋ, ಹೃದಯದ ದೋಷವೋ?’ ಎಂದು ಬಿಜೆಪಿ ಪ್ರಶ್ನಿಸಿದೆ.


Spread the love

About Laxminews 24x7

Check Also

ಅಕ್ರಮ ಬೆಟ್ಟಿಂಗ್​ ಆರೋಪದಲ್ಲಿ ಬಂಧಿತನಾದ ಶಾಸಕ ವೀರೇಂದ್ರ ಪ್ರಕರಣದ ದಾಖಲೆ ಕೇಳಿ ಇಡಿ ಸಮನ್ಸ್​: ಅನಿಲ್ ಗೌಡ ಸಲ್ಲಿಸಿದ ಅರ್ಜಿ ತೀರ್ಪು ಕಾಯ್ದಿರಿಸಿದ ಹೈಕೋರ್ಟ್

Spread the loveಬೆಂಗಳೂರು : ಅಕ್ರಮ ಬೆಟ್ಟಿಂಗ್​ ಆರೋಪದಲ್ಲಿ ಶಾಸಕ ವೀರೇಂದ್ರ ಪಪ್ಪಿ ಬಂಧನ ಪ್ರಕರಣದಲ್ಲಿ ಕೆಲ ದಾಖಲೆ ಒದಗಿಸುವಂತೆ ಇ.ಡಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ