Breaking News

ಈ ದ ಮಿಲಾದ್ ವಿಶೇಷತೆ ಏನು…?

Spread the love

ಮುಸ್ಲಿಮರಿಗೆ ಪವಿತ್ರವಾದ ಎರಡು ಹಬ್ಬಗಳಾದ ಈದ್ ಉಲ್ ಫಿತ್ರ್ ಮತ್ತು ಈದ್ ಉಲ್ ಅಧಾ ಬಳಿಕ ಪ್ರಮುಖವಾದ ದಿನವೆಂದರೆ ಮಿಲಾದುನ್ನಬೀ ಅಥವಾ ಈದ್ ಮಿಲಾದ್ ಆಗಿದೆ. ಇದು ಪ್ರವಾದಿಯವರ ಜನ್ಮ ಮತ್ತು ಪುಣ್ಯ ತಿಥಿಯದಿನದ ರೂಪದಲ್ಲಿ ಆಚರಿಸಲಾಗುತ್ತದೆ. ಇಸ್ಲಾಮಿಕ್ ತಿಂಗಳಾದ ರಬಿ ಉಲ್ ಅವ್ವಲ್ ನಲ್ಲಿ ಬರುವ ಈ ದಿನವನ್ನು ಸುನ್ನಿಗಳು ಮತ್ತು ಶಿಯಾಗಳು ಬೇರೆ ಬೇರೆ ದಿನದಂದು ಆಚರಿಸುತ್ತಾರೆ.

ಶಿಯಾ ಮುಸ್ಲಿಮರು ಈ ತಿಂಗಳ ಹದಿನೇಳರಂದು ಆಚರಿಸಿದರೆ ಸುನ್ನಿ ಮುಸ್ಲಿಮರು ಹನ್ನೆರಡನೇ ತಾರೀಖಿಗೆ ಆಚರಿಸುತ್ತಾರೆ. ಮೊಹಮ್ಮದಿರಿಗಿಂತಲೂ ಮುನ್ನ ಹಲವಾರು ಪ್ರವಾದಿಗಳು ಈ ಜಗತ್ತಿನಲ್ಲಿ ಆಗಮಿಸಿ ಹೋಗಿದ್ದರೂ ಮುಸ್ಲಿಮರ ಪವಿತ್ರ ಗ್ರಂಥವಾದ ಕುರಾನ್ ಪ್ರವಾದಿ ಮೊಹಮ್ಮದರ ಮೂಲಕ ಈ ಜಗತ್ತಿಗೆ ಅವತೀರ್ಣಗೊಂಡಿರುವ ಕಾರಣ ಮೊಹಮ್ಮದರಿಗೆ ವಿಶಿಷ್ಟ ಸ್ಥಾನವಿದೆ. ಈ ಕುರಾನ್ ಬರೆಯ ಒಂದು ದಿನದಲ್ಲಿ ಅವತೀರ್ಣಗೊಂಡಿಲ್ಲ, ಬದಲಿಗೆ ಪೂರ್ಣ ಇಪ್ಪತ್ತಮೂರು ವರ್ಷಗಳು ಬೇಕಾಯಿತು. ಆದರೆ ತಮ್ಮ ಜೀವನದಲ್ಲಿ ಎಂದೂ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರದಿದ್ದ ಮೊಹಮ್ಮದರ ಜನ್ಮದಿನವನ್ನು ಜನ್ಮದಿನವಾಗಿ ಆಚರಿಸುವುದು ತಪ್ಪು ಎಂದು ಹಿರಿಯ ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಬದುಕಿನ ಗುಟ್ಟನ್ನು ಬಿಚ್ಚಿಡುವ ಇಸ್ಲಾಂ ಧರ್ಮದ ಸತ್ಯಾಸತ್ಯತೆ ಅಲ್ಲದೇ ಈ ದಿನವೇ ಅವರ ಪುಣ್ಯ ತಿಥಿಯೂ ಆಗಿರುವ ಕಾರಣ ಜನ್ಮದಿನವಾಗಿ ಸಂಭ್ರಮಿಸುವುದು ಸಲ್ಲದು ಎಂದು ಹೇಳಲಾಗುತ್ತದೆ.

ಆದರೆ ಈ ದಿನವನ್ನು ಪ್ರವಾದಿ ಮೊಹಮ್ಮದರ ಜನ್ಮದಿನದಂತೆ ಆಚರಿಸದೇ ಅವರ ಪ್ರವಚನಗಳನ್ನು ಒರೆಹಚ್ಚುವ, ಅವರ ಜೀವನ ಮತ್ತು ಸಂದೇಶಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡುವ ಕಾರ್ಯಾಗಾರಗಳನ್ನು ಈ ದಿನ ಹಮ್ಮಿಕೊಳ್ಳಲಾಗುತ್ತದೆ. ಧಾರ್ಮಿಕ ಶಿಕ್ಷಣ ಪಡೆಯುತ್ತಿರುವ ಮಕ್ಕಳ ಪರೀಕ್ಷೆಯ ಫಲಿತಾಂಶ ಪ್ರಕಟಣೆ, ಉತ್ತಮ ಸಾಧನೆ ತೋರಿದ ಮಕ್ಕಳಿಗೆ ಪ್ರೋತ್ಸಾಹ ಮೊದಲಾದ ಕಾರ್ಯಕ್ರಮಗಳು ನಡೆಯುತ್ತವೆ.

ಈ ದಿನದಂದು ಮಸೀದಿಗಳಲ್ಲಿ ವಿಶೇಶ ಪ್ರವಚನಗಳನ್ನು ಏರ್ಪಡಿಸಿ ಪ್ರವಾದಿಯವರ ಬಗ್ಗೆ ಮಾಹಿತಿಯನ್ನೂ, ಅವನ್ನು ಆಚರಿಸುವ ಬಗೆಯನ್ನೂ, ಧರ್ಮಪಾಲನೆಯ ಮಹತ್ವ ಮತ್ತು ಇದನ್ನು ಪಾಲಿಸುವ ಬಗೆಯನ್ನೂ ವಿಷದಪಡಿಸಲಾಗುತ್ತದೆ.

ಧರ್ಮಪಾಲನೆಯಲ್ಲಿ ಎಲ್ಲೆಲ್ಲಿ ನಾವು ತಪ್ಪು ಮಾಡುತ್ತಿದ್ದೇವೆ, ಇದನ್ನು ಸರಿಪಡಿಸಿಕೊಳ್ಳುವ ಬಗೆ ಹೇಗೆ? ನಾವಿರದ ನಾನೂರು ವರ್ಷಗಳ ಹಿಂದೆ ಪ್ರವಾದಿಯವರು ಪ್ರತಿಪಾದಿಸಿದ್ದ ವಿಷಯಗಳು ಇಂದಿನ ದಿನಕ್ಕೂ ಅನ್ವಯವಾಗುವುದು ಹೇಗೆ? ಸಮಾಜದಲ್ಲಿ ಸಹಬಾಳ್ವೆ, ಸಾಮರಸ್ಯ, ಸೌಹಾರ್ದತೆಗೆ ಪ್ರವಾದಿಯವರು ನೀಡಿದ ಸಂದೇಶ ಏನು ಮೊದಲಾದ ವಿಷಯಗಳ ಮೇಲೆ ಚರ್ಚೆ ನಡೆಯುತ್ತವೆ
ಇದು ಹಾದಿ ತಪ್ಪುತ್ತಿರುವ ಸಮಾಜದ ಯೋಚನೆಗಳಿಗೆ ಕಡಿವಾಣ ಹಾಕಿ ಸಮಾಜದಲ್ಲಿ ಶಾಂತಿ ನೆಮ್ಮದಿ ಮತ್ತು ಸೌಹಾರ್ದತೆ ಮೂಡಲು ನೆರವಾಗುತ್ತದೆ. ಊರಿನ ಜನರಿಗೆ ಊಟದ ವ್ಯವಸ್ಥೆಯೂ ಇದ್ದು ಉತ್ತಮ ಊಟದ ಭಾಗ್ಯವಿಲ್ಲದ ಬಡವರಿಗೂ ಎಲ್ಲರ ಸರಿಸಮಾನವಾದ ಆಹಾರ ದೊರಕುತ್ತದೆ. ಅಲ್ಲದೇ ಆಹಾರವಸ್ತು ಮತ್ತು ಇತರ ನಿತ್ಯಬಳಕೆಯ ವಸ್ತುಗಳನ್ನು ಅರ್ಹರಿಗೆ ದಾನ ಮಾಡಲಾಗುತ್ತದೆ.

ಆದ್ದರಿಂದ ಈದ್ ಮಿಲಾದ್ ಎಂದರೆ ಪ್ರವಾದಿಯವರ ಜನ್ಮದಿನ ಎಂಬ ಕೇವಲ ಸಾಂಕೇತಿಕ ರೂಪವೇ ಹೊರತು ನಿಜವಾಗಿ ಅವರ ಸಂದೇಶಗಳ್ ಪುನರ್ಸ್ಮರಣೆ ಮತ್ತು ಆಚರಣೆಯ ಧ್ಯೋತಕವೇ ಆಗಿದೆ. ತಮ್ಮ ವಿಚಾರಗಳಿಂದ ಜಗತ್ತಿನ ಲಕ್ಷಾಂತರ ಜನರ ಹೃದಯದಲ್ಲಿರುವ ಪ್ರವಾದಿ ಮೊಹಮ್ಮದರ ವಿಚಾರಗಳನ್ನು ತಿರುವಿ ಹಾಕಲು ಈದ್ ಮಿಲಾದ್ ಒಂದು ಸುದಿನವಾಗಿ ಬಳಕೆಯಾಗುತ್ತದೆ.


Spread the love

About Laxminews 24x7

Check Also

ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ ಪಾರದರ್ಶಕವಾಗಲು ಕ್ರಮಕೈಗೊಳ್ಳಿ: ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ

Spread the love ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ ಪಾರದರ್ಶಕವಾಗಲು ಕ್ರಮಕೈಗೊಳ್ಳಿ: ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ ಕಲಬುರಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ