Breaking News

ಅಕ್ಟೋಬರ್‌ 25, 1-ರಿಂದ 5ನೇ ತರಗತಿ ವರೆಗಿನ ಶಾಲೆ ಪುನರಾರಂಭಕ್ಕೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್

Spread the love

ರಾಜ್ಯ ಸರ್ಕಾರ : 1-ರಿಂದ 5ನೇ ತರಗತಿ ವರೆಗಿನ ಶಾಲೆ ಪುನರಾರಂಭಕ್ಕೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು, ಮಾರ್ಗಸೂಚಿ ಕೂಡ ಪ್ರಕಟವಾಗಿದೆ. ಅಕ್ಟೋಬರ್‌ 25 ರಿಂದ ಶಾಲೆ ಆರಂಭ ಮಾಡಲು ಕೋವಿಡ್‌ ತಾಂತ್ರಿಕ ಸಮಿತಿ ಒಪ್ಪಿಗೆ ನೀಡಲಾಗಿದೆ.

ಈಗಾಗಲೇ 6 ನೇ ತರಗತಿಯಿಂದ ಉನ್ನತ ಶಿಕ್ಷಣ ಹಂತದವರೆಗಿನ ಎಲ್ಲ ತರಗತಿಗಳ ಭೌತಿಕ ಕ್ಲಾಸ್‌ ಅನುಮತಿ ನೀಡಿದ್ದು, ಇದೀಗ 1-ರಿಂದ 5ನೇ ತರಗತಿ ಶಾಲೆಗಳನ್ನು ಪುನರ್‌ ಆರಂಭ ಮಾಡಲು ಮುಂದಾಗಿದೆ.

ಇನ್ನೂ ಶಾಲೆಗೆ ಮಕ್ಕಳಿಗೆ ಬರಲು ಯಾವುದೇ ಪ್ರಯತ್ನ ಮಾಡುವಂತಿಲ್ಲ, ಜೊತೆಗೆ ಮಕ್ಕಳು ಶಾಲೆಗೆ ಬರಲು ಹಾಜರಾತಿ ಕಡ್ಡಾಯವಲ್ಲ ಅಂತ ಸಚಿವ ಬಿ.ಸಿ ನಾಗೇಶ್‌ ಹೇಳಿದ್ದಾರೆ.

ಇದೇ ವೇಳೆ ಒಂದು ವಾರದ ಮಟ್ಟಿಗೆ ಶಾಲೆಯ ಅವಧಿಯನ್ನು ಕಡಿತ ಮಾಡಲಾಗುವುದು ಬಳಿಕ ಎಂದಿನಂತೆ ಸಮಯವನ್ನು ಮುಂದುವರೆಯಲಿದೆ ಅಂತ ಹೇಳಿದ್ದಾರೆ. ಇದಲ್ಲದೇ ಮಕ್ಕಳ ಪೋಷಕರ ಈಗಾಗಲೇ ಶಾಲೆ ಆರಂಭವಾಗಿರುವುದಕ್ಕೆ ಉತ್ತಮವಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.


Spread the love

About Laxminews 24x7

Check Also

ಬೈಕ್ – ಹಾಲಿನ ವಾಹನ ನಡುವೆ ಡಿಕ್ಕಿ; ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಸಾವು

Spread the loveಶಿವಮೊಗ್ಗ: ಹಾಲಿನ ವಾಹನ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಶಿವಮೊಗ್ಗದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ