Breaking News

ಬಿಟ್ಟೂಬಿಡದೆ ಸುರಿಯುತ್ತಿರುವ ಮಳೆ ಏರ್​ಪೋರ್ಟ್​ಗೆ ಹೋಗಲು ಟ್ರ್ಯಾಕ್ಟರ್​ ಮೊರೆಹೋದ ಪ್ಯಾಸೆಂಜರ್ಸ್

Spread the love

ಬೆಂಗಳೂರು: ಹಲವು ದಿನಗಳಿಂದ ಬಿಟ್ಟೂಬಿಡದೆ ಸುರಿಯುತ್ತಿರುವ ಮಳೆ ಬೆಂಗಳೂರಿಗರನ್ನ ಕಂಗೆಡಿಸಿದೆ. ಇಂದು ಕೂಡ ಧಾರಾಕಾರ ಮಳೆ ಸುರಿದಿದ್ದು ವಾಹನ ಸವಾರರು ಪರದಾಡುವಂತಾಗಿತ್ತು. ಇತ್ತ ದೇವನಹಳ್ಳಿ ಏರ್​ಪೋರ್ಟ್ ಬಳಿಯೂ ಭಾರೀ ಮಳೆಯಾಗಿದ್ದು ಏರ್​​ಪೋರ್ಟ್ ಅರೈವಲ್ ಮತ್ತು ಡಿಪಾರ್ಚರ್ ವೇ, ಪಾರ್ಕಿಂಗ್ ಬಳಿಯೂ ಕೆರೆಯಂಥ ಪರಿಸ್ಥಿತಿ ನಿರ್ಮಾಣವಾಗಿತ್ತು.

 

ಇತ್ತ ಏರ್​ಪೋರ್ಟ್​ಗೆ ಹೋಗುವ ಪ್ಯಾಸೆಂಜರ್​ಗಳು ಏರ್​​ಪೋರ್ಟ್​ಗೆ ತೆರಳಬೇಕಿದ್ದ ಬಸ್ ಸಿಗದೇ ಪರದಾಡುವಂತಾಗಿದೆ. ಈ ವೇಳೆ ದೇವರಂತೆ ಬಂದ ಟ್ರ್ಯಾಕ್ಟರ್ ಚಾಲಕನೋರ್ವ ಏರ್​ಪೋರ್ಟ್​ಗೆ ಹೋಗಲು ಕಾದು ಸುಸ್ತಾಗಿದ್ದ ಪ್ರಯಾಣಿಕರಿಗೆ ನೆರವಾಗಿದ್ದಾನೆ. ಪ್ರಯಾಣಿಕರನ್ನ ಟ್ರ್ಯಾಕ್ಟರ್​ಗೆ ಹತ್ತಿಸಿಕೊಂಡು ಏರ್​ಪೋರ್ಟ್​ಗೆ ಡ್ರಾಪ್ ಮಾಡಿ ಮಾನವೀಯತೆ ಮೆರೆದಿದ್ದಾನೆ.


Spread the love

About Laxminews 24x7

Check Also

ಡಿಜಿಟಲ್ ಅರೆಸ್ಟ್ ಮೂಲಕ ಮಂಗಳೂರಿನ ಮಹಿಳೆಗೆ 3.15 ಕೋಟಿ ರೂಪಾಯಿ ವಂಚನೆ

Spread the loveಮಂಗಳೂರು: ಮಂಗಳೂರಿನ ಮಹಿಳೆಯೊಬ್ಬರು ಡಿಜಿಟಲ್ ಅರೆಸ್ಟ್ ಎಂಬ ಹೆಸರಿನಲ್ಲಿ ನಡೆದ ಆನ್‌ಲೈನ್ ವಂಚನೆಯಲ್ಲಿ 3 ಕೋಟಿ 15 ಲಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ