ದೇಶದಲ್ಲಿ ತೈಲೋತ್ಪನ್ನಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇಷ್ಟು ದಿನ ಪೆಟ್ರೋಲ್ ದರ ಮಾತ್ರ ಶತಕ ದಾಟಿತ್ತು. ಇದೀಗ ಡೀಸೆಲ್ ದರ ಕೂಡ ಶತಕ ಬಾರಿಸಿದೆ. ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಯು ಕೇವಲ ಜನಸಾಮಾನ್ಯನಿಗೆ ಮಾತ್ರವಲ್ಲದೇ ಸರ್ಕಾರದ ಪಾಲಿಗೂ ಚಿಂತಾಜನಕ ವಿಷಯವಾಗಿ ಬದಲಾಗಿದೆ.
ತೈಲೋತ್ಪನ್ನಗಳ ದರ ಏರಿಕೆಯ ಹಿನ್ನೆಲೆಯಲ್ಲಿ ಶಾಸಕರ ಕಾರುಗಳು ದುರ್ಬಳಕೆಯಾಗದಂತೆ ತಡೆಯಲು ರಾಜ್ಯ ಸರ್ಕಾರ ಮಾಸ್ಟರ್ ಪ್ಲಾನ್ ರೂಪಿಸಿದೆ. ಮಿತವ್ಯಯ ಮಾಡಲು ನಿರ್ಧರಿಸಿರುವ ಆರ್ಥಿಕ ಇಲಾಖೆಯು ಹೊಸ ಕ್ರಮವೊಂದನ್ನು ಕೈಗೊಂಡಿದೆ.
ಶಾಸಕರ ಆಪ್ತರು ಶಾಸಕರ ಹೆಸರಿನಲ್ಲಿ ಕಾರು ಬಳಕೆ ಮಾಡುತ್ತಿರುವ ವಿಚಾರ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಟ್ರಿಪ್ಶೀಟ್ಗೆ ಸಹಿ ಹಾಕುವುದನ್ನು ಕಡ್ಡಾಯಗೊಳಿಸಲಾಗಿದೆ. ಟ್ರಿಪ್ ಶೀಟ್ಗೆ ಪ್ರತಿಬಾರಿ ಶಾಸಕರೇ ಸಹಿ ಹಾಕಬೇಕು. ಈ ರೀತಿ ಮಾಡುವುದರಿಂದ ಶಾಸಕರ ಪಿಎ ಹಾಗೂ ಆಪ್ತರು ಇನ್ನೋವಾ ಕಾರನ್ನು ದುರ್ಬಳಕೆ ಮಾಡುವುದನ್ನು ತಪ್ಪಿಸಬಹುದಾಗಿದೆ ಎಂದು ಅಂದಾಜಿಸಲಾಗಿದೆ.
Laxmi News 24×7