Breaking News

ಶೂ ಧರಿಸಿ ಚಾಮುಂಡಿ ದೇವಸ್ಥಾನದ ಒಳಗೆ ಹೋದ ಮೈಸೂರು ಎಸ್​ಪಿ;

Spread the love

ಎಸ್​ಪಿ ಚೇತನ್ ದೇವಸ್ಥಾನದ ಒಳಗೆ ಹೋಗುತ್ತಿದ್ದಂತೆ ಪೊಲೀಸ್ ಸಿಬ್ಬಂದಿ ಹಿಂದೆ ಹೋಗುತ್ತಾರೆ. ಆಗ ಪೊಲೀಸ್ ಸಿಬ್ಬಂದಿ ಸಾರ್ ಶೂ ಶೂ ಅಂತ ಕೂಗುತ್ತಾರೆ.

ಮೈಸೂರು ಎಸ್​ಪಿ ಚಾಮುಂಡಿ ದೇವಸ್ಥಾನದ ಒಳಗೆ ಶೂ ಧರಿಸಿ ಒಳಗೆ ಹೋಗಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಂದೋಬಸ್ತ್​ನಲ್ಲಿದ್ದ ಎಸ್​ಪಿ ಚೇತನ್ ಶೂ ಧರಿಸಿ ಚಾಮುಂಡಿ ದೇವಸ್ಥಾನದ ಒಳಗೆ ಹೋಗಿದ್ದರು. ಎಸ್​ಪಿ ಚೇತನ್ ದೇವಸ್ಥಾನದ ಒಳಗೆ ಹೋಗುತ್ತಿದ್ದಂತೆ ಪೊಲೀಸ್ ಸಿಬ್ಬಂದಿ ಹಿಂದೆ ಹೋಗುತ್ತಾರೆ. ಆಗ ಪೊಲೀಸ್ ಸಿಬ್ಬಂದಿ ಸಾರ್ ಶೂ ಶೂ ಅಂತ ಕೂಗುತ್ತಾರೆ. ಪೊಲೀಸ್ ಸಿಬ್ಬಂದಿ ಕೂಗುತ್ತಿದ್ದಂತೆ ಎಸ್​ಪಿ ಹೊರ ಬಂದು ಶೂ ಬಿಚ್ಚುತ್ತಾರೆ. ತರಾತುರಿಯಲ್ಲಿ ಶೂ ಹಾಕಿಕೊಂಡೇ ದೇಗುಲ ಪ್ರವೇಶಿಸಿದ್ದರು. ಕಾಲಿನಲ್ಲಿ ಶೂ ಇರುವುದು ತಿಳಿಯುತ್ತಿದ್ದಂತೆ ಎಸ್​ಪಿ ಹೊರಗೆ ಬಂದರು. ಚಾಮುಂಡಿ ಬೆಟ್ಟದ ಮುಖ್ಯ ದ್ವಾರದಲ್ಲಿ ಈ ಘಟನೆ ನಡೆದಿದೆ.

 

Spread the love

About Laxminews 24x7

Check Also

ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ ಪಾರದರ್ಶಕವಾಗಲು ಕ್ರಮಕೈಗೊಳ್ಳಿ: ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ

Spread the love ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ ಪಾರದರ್ಶಕವಾಗಲು ಕ್ರಮಕೈಗೊಳ್ಳಿ: ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ ಕಲಬುರಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ