ನವದೆಹಲಿ: ದೇಶದ ಜನರು ಎಲ್ಲ ದಿನಬಳಕೆಯ ವಸ್ತಗಳ ಬೆಲೆ ಏರಿಕೆಯಿಂದ ಕಂಗಾಲಾಗಿದ್ದಾರೆ. ಇದೀಗ ಪೆಟ್ರೋಲ್, ಡೀಸೆಲ್ ಬೆಲೆಗಳಲ್ಲಿ ಮತ್ತೆ ಏರಿಕೆಯಾಗಿದೆ. ಪೆಟ್ರೋಲ್ 26 ರಿಂದ 30 ಪೈಸೆಗಳಷ್ಟು ಮತ್ತು ಡೀಸೆಲ್ ದರ 35 ರಿಂದ 38 ಪೈಸೆಗಳಷ್ಟು ಏರಿಕೆಯಾಗಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರತೀ ಒಂದು ಲೀಟರ್ ಪೆಟ್ರೋಲ್‌ಗೆ 31 ಪೈಸೆ ಏರಿದರೆ, ಪ್ರತೀ ಒಂದು ಲೀಟರ್ ಡೀಸೆಲ್ ದರದಲ್ಲಿ 37 ಪೈಸೆ ಏರಿಕೆ ಕಂಡಿದೆ.
ರಾಜ್ಯದ ಪ್ರಮುಖ ನಗರಗಳ ಪೆಟ್ರೋಲ್ ಡಿಸೇಲ್ ಬೆಲೆ ಹೀಗಿದೆ:-
ಬೆಂಗಳೂರು: ಪೆಟ್ರೋಲ್ ದರ- 106.83 ರೂ., ಡೀಸೆಲ್ ದರ- 97.40 ರೂ.
ಮಂಗಳೂರು: ಪೆಟ್ರೋಲ್ ದರ- 106.20ರೂ., ಡೀಸೆಲ್ ದರ-96.78 ರೂ.
ಮೈಸೂರು: ಪೆಟ್ರೋಲ್ ದರ- 106.33 ರೂ., ಡೀಸೆಲ್ ದರ- 96.94 ರೂ. ದಾಖಲಾಗಿದೆ.
ದೇಶದ ಪ್ರಮುಖ ನಗರಗಳಲ್ಲಿ ದರ:-
ದೆಹಲಿ: ಪೆಟ್ರೋಲ್ ದರ- 103.24 ರೂ., ಡೀಸೆಲ್ ದರ- 91.77 ರೂಪಾಯಿ.
ಮುಂಬೈ: ಪೆಟ್ರೋಲ್ ದರ-109.25 ರೂ., ಡೀಸೆಲ್ ದರ- 99.55 ರೂ.
ಚೆನ್ನೈ: ಪೆಟ್ರೋಲ್ ದರ- 100.75 ರೂ., ಡೀಸೆಲ್ ದರ- 96.26 ರೂ.
ತುಂಬಾ ವಿಶೇಷ ಹಾಗೂ ನಿಖರತೆ ಹೊಂದಿರುವ ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ…